ದಂಡಿ ಸತ್ಯಾಗ್ರಹದಲ್ಲಿ ಗಾಂಧೀಜಿ ಜೊತೆ ಅರ್ನಬ್ ಜೀ!

Update: 2017-09-20 17:52 GMT

ನಕ್ಕು ನಕ್ಕು ಸುಸ್ತಾಗುವಷ್ಟು #ArnabDidIt ಅಣಕಗಳು  

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯ 2 ವರ್ಷಗಳ ಹಿಂದಿನ ವಿಡಿಯೋವೊಂದು ವೈರಲ್ ಆದ ನಂತರ ಟ್ವಿಟ್ಟರ್ ನಲ್ಲಿ #ArnabDidIt ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡಿಂಗ್ ಆಗಿದೆ.

2002ರಲ್ಲಿ ಸಂಭವಿಸಿದ ಗುಜರಾತ್ ಗಲಭೆಯ ಸಂದರ್ಭ ಮುಖ್ಯಮಂತ್ರಿಯ ನಿವಾಸದ ಸಮೀಪ ತನ್ನ ಕಾರಿನ ಮೇಲೆ ದಾಳಿ ನಡೆದಿತ್ತು ಎಂದು ಹೇಳಿದ್ದ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯ ಎರಡು ವರ್ಷಗಳ ಹಿಂದಿನ ವಿಡಿಯೋವೊಂದನ್ನು  ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಪೋಸ್ಟ್ ಮಾಡಿದ್ದರು. ನಂತರ “ನನ್ನ ಮಿತ್ರ 2002 ರಲ್ಲಿ ಗುಜರಾತ್ ಸಿಎಂ ನಿವಾಸದ ಸಮೀಪ ತನ್ನ ಕಾರಿನ ಮೇಲೆ ದಾಳಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಆದರೆ ಅವರು ಆ ಗಲಭೆ ವರದಿ ಮಾಡಲು ಹೋಗಿರಲೇ ಇಲ್ಲ” ಎಂದು ಟ್ವೀಟ್ ಮಾಡಿದ್ದರು.

ಗೋಸ್ವಾಮಿಯ ‘ಫೇಕು’ ವಿಡಿಯೋದ ಬಂಡವಾಳ ಬಯಲಾಗುತ್ತಲೇ ಇತ್ತ ಟ್ವಿಟ್ಟರಿಗರು ಕಾಲೆಳೆಯಲು ಶುರುವಿಟ್ಟುಕೊಂಡಿದ್ದಾರೆ. ಸುಳ್ಳು ಹೇಳಿ ಸಿಕ್ಕಿಬಿದ್ದ ರಿಪಬ್ಲಿಕ್ ಟಿವಿ ಸಂಪಾದಕರಿಗೆ #ArnabDidIt ಎನ್ನುವ ಹ್ಯಾಶ್ ಟ್ಯಾಗ್ ಮೂಲಕ ಮಹಾ ಮಂಗಳಾರತಿ ಮಾಡಿದ್ದಾರೆ.

“ದಂಡಿ ಸತ್ಯಾಗ್ರಹದಲ್ಲಿ ಗಾಂಧೀಜಿ ಜೊತೆ ಅರ್ನಬ್ ಜೀ”, “ಬೀಫ್ ತಿನ್ನಲು ಅರ್ನಾಬ್ ನಿರಾಕರಿಸಿದ್ದಕ್ಕಾಗಿ 1857ರ ಸಿಪಾಯಿ ದಂಗೆ ಆರಂಭವಾಯಿತು”, “ಬಿಳಿಯರಿಗಾಗಿ ಮಾತ್ರ ಸೀಮಿತವಾಗಿದ್ದ ರೈಲು ಬೋಗಿಯಲ್ಲಿ ಕೂತದ್ದಕ್ಕಾಗಿ 1893ರಲ್ಲಿ ಅರ್ನಾಬ್ ಗೋಸ್ವಾಮಿಯವರನ್ನು ದಕ್ಷಿಣ ಆಫ್ರಿಕಾದ ರೈಲ್ವೆ ನಿಲ್ದಾಣದಲ್ಲಿ ರೈಲಿನಿಂದ ಹೊರಗೆಸೆಯಲಾಯಿತು”, “ಭಾರತದ ಸಂವಿಧಾನವನ್ನು ರಚಿಸಿದ್ದು ಮಿ.ಅರ್ನಾಬ್ಕರ್ ಎನ್ನುವುದು ಹೆಚ್ಚಿನ ಜನರಿಗೆ ಗೊತ್ತಿಲ್ಲ”, “ಪ್ರಪ್ರಥಮ ಬಾರಿಗೆ ಭಾರತಕ್ಕೆ ಕ್ರಿಕೆಟ್ ವಿಶ್ವಕಪ್ ತಂದುಕೊಟ್ಟ ಅರ್ನಾಬ್ ರಿಗೆ ಧನ್ಯವಾದಗಳು” …. ಎನ್ನುವ ಸಾಲುಸಾಲು ಟ್ವೀಟ್ ಗಳು  ‘ಫೇಕು’ ವಿಡಿಯೋಗೆ ಸಂಬಂಧಿಸಿ ಅರ್ನಾಬ್ ಗೋಸ್ವಾಮಿಗೆ ಮಂಗಳಾರತಿ ಮಾಡಿದೆ. ಟ್ವಿಟ್ಟರ್ ನಲ್ಲಿ ‘#ArnabDidIt ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡಿಂಗ್ ನಲ್ಲಿದೆ.

‘#ArnabDidIt ಹ್ಯಾಶ್ ಟ್ಯಾಗ್ ಮೂಲಕ ಅರ್ನಾಬ್ ಗೋಸ್ವಾಮಿಯನ್ನು ಟ್ವಿಟ್ಟರಿಗರು ಕಾಲೆಳೆದ ಕೆಲ ಸ್ಯಾಂಪಲ್ ಗಳು ಇಲ್ಲಿವೆ:

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News