ಅರಬ್ ಬಿಕ್ಕಟ್ಟು ಪರಿಹಾರಕ್ಕೆ ನಿಶ್ಶರ್ತ ಮಾತುಕತೆ: ಕತರ್ ಅಮೀರ್ ಪುನರುಚ್ಚಾರ

Update: 2017-09-20 17:48 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಸೆ. 20: ಕತರ್ ಮತ್ತು ಅದರ ನಾಲ್ಕು ನೆರೆಯ ಅರಬ್ ದೇಶಗಳ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ‘ನಿಶ್ಶರ್ತ ಮಾತುಕತೆ’ ನಡೆಯಬೇಕೆಂದು ಕತರ್ ಅಮೀರ್ ಶೇಖ್ ತಮೀಮ್ ಬಿನ್ ಹಾಮದ್ ಅಲ್-ತಾನಿ ಮಂಗಳವಾರ ಕರೆನೀಡಿದ್ದಾರೆ.

193 ಸದಸ್ಯ ದೇಶಗಳ ವಿಶ್ವಸಂಸ್ಥೆ ಮಹಾಧಿವೇಶನದ ವೇದಿಕೆಯಲ್ಲಿ ಮಾತನಾಡಿದ ಅವರು, ಸಾರ್ವಭೌಮತ್ವಕ್ಕೆ ಪರಸ್ಪರ ಗೌರವ ನೀಡುವ ಆಧಾರದಲ್ಲಿ ನಿಶ್ಶರ್ತ ಮಾತುಕತೆ ನಡೆಯಬೇಕೆಂಬ ತನ್ನ ಕರೆಯನ್ನು ಪುನರುಚ್ಚರಿಸಿದರು.

ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ಜೂನ್ 5ರಂದು ಕತರ್‌ನೊಂದಿಗಿನ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧವನ್ನು ಕಡಿದುಕೊಂಡಿದ್ದವು. ಜೊತೆಗೆ, ಜಗತ್ತಿನ ಅತಿ ದೊಡ್ಡ ದ್ರವೀಕೃತ ನೈಸರ್ಗಿಕ ಅನಿಲದ ರಫ್ತುದಾರ ದೇಶದೊಂದಿಗಿನ ವಾಯು ಮತ್ತು ಸಮುದ್ರ ಮಾರ್ಗಗಳನ್ನೂ ಮುಚ್ಚಿದ್ದವು.

ಈ ಬಿಕ್ಕಟ್ಟನ್ನು ಪರಿಹರಿಸಲು ಅಮೆರಿಕವೂ ಹೆಚ್ಚಿನ ಪ್ರಯತ್ನಗಳನ್ನು ನಡೆಸುತ್ತಿದೆ. ಬಳಿಕ, ಟ್ರಂಪ್ ಮತ್ತು ಶೇಖ್ ತಮೀಮ್ ಈ ವಿಷಯದಲ್ಲಿ ಮಾತುಕತೆ ನಡೆಸಿದರು.

ಈ ಬಿಕ್ಕಟ್ಟು ಶೀಘ್ರ ಪರಿಹಾರಗೊಳ್ಳುವುದು ಎಂಬ ಭರವಸೆಯನ್ನು ತಾನು ಕಾಣುತ್ತಿದ್ದೇನೆ ಎಂದು ತಮೀಮ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News