ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಮ್ ವಿರೋಧಿ ಶಬ್ಧಗಳನ್ನು ನಿಷೇಧಿಸಿದ ಚೀನಾ

Update: 2017-09-21 13:35 GMT

ಬೀಜಿಂಗ್, ಸೆ.21; ಸಾಮಾಜಿಕ ಜಾಲತಾಣಗಳ ಬಳಸಲಾಗುತ್ತಿದ್ದ ಇಸ್ಲಾಮ್ ವಿರೋಧಿ ಶಬ್ಧಗಳನ್ನು ಚೀನಾ ನಿಷೇಧಿಸಿರುವುದಾಗಿ ವರದಿಯಾಗಿದೆ.

“ಸಾಮಾಜಿಕ ಜಾಲತಾಣಗಳ ಬಳಕೆದಾರರು ಉಪಯೋಗಿಸುತ್ತಿದ್ದ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುವಂತಹ ಶಬ್ಧಗಳನ್ನು ನಿಷೇಧಿಸಲಾಗಿದೆ. ನೆಟ್ಟಿಗರಿಂದ ಈ ಬಗ್ಗೆ  ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

“ಇಸ್ಲಾಂ ಹಾಗೂ ಮುಸ್ಲಿಮರ ವಿರುದ್ಧ ಬಳಕೆಯಾಗುತ್ತಿದ್ದ ಶಬ್ಧಗಳನ್ನು ತೆಗೆದುಹಾಕುವುದು ಅವಶ್ಯಕವಾಗಿದೆ. ಒಂದು ನಿರ್ದಿಷ್ಟ ಗುಂಪಿನ ವಿರುದ್ಧದ ಆನ್ ಲೈನ್ ದ್ವೇಷವನ್ನು ತಡೆಯಲು ಇದು ಅವಶ್ಯಕವಾಗಿದೆ” ಎಂದು ಬೀಜಿಂಗ್ ನ ಮಿಂಝು ವಿಶ್ವವಿದ್ಯಾಲಯದ ಪ್ರೊಫೆಸರ್ ಕ್ಸಿಯಾಂಗ್ ಕುಕ್ಸಿನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News