ಇಲ್ಲಿ ಪಬ್‌ನಲ್ಲೂ ಆಧಾರ್ ಕಾರ್ಡ್ ಕಡ್ಡಾಯ!

Update: 2017-09-21 15:51 GMT

ಹೊಸದಿಲ್ಲಿ, ಸೆ. 20: ಮುಂದೊಂದು ದಿನ ನೀವೆಲ್ಲಾದರೂ ಹೈದರಾಬಾದ್‌ನಲ್ಲಿ ಪಬ್‌ಗೆ ಹೋದರೆ, ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಲು ಮರೆಯದಿರಿ. ಯಾಕೆಂದರೆ ಇನ್ನುಮುಂದೆ ಹೈದರಾಬಾದ್‌ನ ಪಬ್‌ಗಳಲ್ಲಿ ಆಧಾರ್ ಕಾರ್ಡ್ ಕಡ್ಡಾಯ.

ಪಬ್‌ಗೆ ಹೋಗುವವರು ಗುರುತು ಪತ್ರ, ನಿರ್ದಿಷ್ಟವಾಗಿ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ತೆಲಂಗಾಣದ ಅಬಕಾರಿ ಇಲಾಖೆ ಆದೇಶಿಸಿದೆ. ಗ್ರಾಹಕರು ತಮ್ಮ ಪ್ರಾಯ ಸಾಬೀತುಪಡಿಸಲು ಆಧಾರ್ ಕಾರ್ಡ್ ತೋರಿಸುವಂತೆ ಹೇಳಿದೆ. 21 ವರ್ಷದ ಕೆಳಗಿನ ಗ್ರಾಹಕರಿಗೆ ಪಬ್ ಪ್ರವೇಶಕ್ಕೆ ಅವಕಾಶ ನೀಡಬೇಡಿ ಎಂದು ಅಬಕಾರಿ ಇಲಾಖೆ ಎಲ್ಲ ಪಬ್ ಮಾಲಕರಿಗೆ ನಿರ್ದೇಶಿಸಿದೆ.

17 ವರ್ಷದ ಬಾಲಕಿಯ ಹತ್ಯೆಯ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪಬ್ ಹಾಗೂ ಬಾರ್ ಮ್ಯಾನೇಜರ್‌ಗಳು ತಮ್ಮ ಗ್ರಾಹಕರ ಪ್ರತ್ಯೇಕ ನೋಂದಣಿ ಹಾಗೂ ವಿವರಗಳನ್ನು ದಾಖಲಿಸುವಂತೆ ಸರಕಾರ ನಿರ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News