​ಎಸ್ಸೆಸ್ಸೆಫ್ ಧ್ವಜ ದಿನಾಚರಣೆ ಕಾರ್ಯಕ್ರಮ

Update: 2017-09-21 18:36 GMT

ಉಳ್ಳಾಲ,ಸೆ.21 : ಯುವ ಸಮೂಹವು ಮಾದಕ ವಸ್ತುಗಳ ದಾಸರಾಗಿ,  ಕೆಡುಕಿನತ್ತ ವಾಲುತ್ತಿರುವಾಗ ಅವರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಕೆಡುಕುಗಳಿಂದ ಒಳಿತಿನೆಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಜಾಗೃತಿ ಮೂಡಿಸುವ ಕಾರ್ಯ ಎಸ್ಸೆಸ್ಸೆಫ್ ನಿಂದ ನಡೆಯುತ್ತಿದೆ ಎಂದು ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ತಿಳಿಸಿದರು. ಅವರು ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಆಶ್ರಯದಲ್ಲಿ ಎಸ್ಸೆಸ್ಸೆಫ್ ನ 29ನೆ ಸಂಸ್ಥಾಪನಾ ದಿನದ ಅಂಗವಾಗಿ ಉಳ್ಳಾಲ ಅಕ್ಕರೆಕೆರೆಯಲ್ಲಿ ನಡೆದ ಧ್ವಜ ದಿನಾಚರಣೆಯ ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಮಾತನಾಡಿದರು. ಶಾಖಾಧ್ಯಕ್ಷ ಶಾಹುಲ್ ಹಮೀದ್ ಜೌಹರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್, ಎಸ್ ವೈ ಎಸ್ ಸಾಂತ್ವನ ವಿಭಾಗದ ಮುಕ್ಕಚ್ಚೇರಿ ಸಂಚಾಲಕ ಮುಸ್ತಫ ಮಾಸ್ಟರ್, ಉಳ್ಳಾಲ ಎಸ್ ವೈ ಎಸ್ ನ ಹಿರಿಯ ಮೇಧಾವಿ ಹಸನ್ ಹಾಜಿ ಪಟೇಲ್ ಕಂಪೌಂಡ್ ಹಾಗು ಎಸ್ಸೆಸ್ಸೆಫ್ ಕಾರ್ಯಕರ್ತರು ಧ್ವಜಾರೋಹಣ ಕಾರ್ಯಕ್ರಮಕ್ಕೆ  ಕೈ ಜೋಡಿಸಿದರು. ಬಳಿಕ ಮುಸ್ತಫ ಮಾಸ್ಟರ್ ಮುಕ್ಕಚ್ಚೇರಿ ಹಾಗು ಸಯ್ಯಿದ್ ಖುಬೈಬ್ ತಂಗಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸ್ಸೆಸ್ಸೆಫ್ ಅಕ್ಕರೆಕೆರೆ ಕ್ಯಾಂಪಸ್ ಕಾರ್ಯದರ್ಶಿ ಮುಂಶೀದ್, ಎಸ್ ಬಿ ಎಸ್ ಅಕ್ಕರೆಕೆರೆ ಸಂಚಾಲಕ ಇರ್ಫಾನ್ ಪಟೇಲ್ ಕಂಪೌಂಡ್, ಮುಝಯ್ಯಿನ್, ಸೈಝಾನ್, ಸಾಹಿಲ್ ಮತ್ತಿತ್ತರರು ಉಪಸ್ಥಿತರಿದ್ದರು. ಅಕ್ಕರೆಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ಜಿಶಾನ್ ಸ್ವಾಗತಿಸಿ ಕೋಶಾಧಿಕಾರಿಯಾದ ಸಿರಾಜುದ್ದೀನ್ ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News