ಸೆ. 24ರಂದು ಬಿಐಟಿಯಿಂದ ‘ಗ್ರೀನ್ ವಾಕಥಾನ್ 2017’

Update: 2017-09-24 03:59 GMT

ಮಂಗಳೂರು, ಸೆ.22: ಪರಿಸರದ ಬಗ್ಗೆ ಹೆಚ್ಚಿನ ಒತ್ತು ನೀಡಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿರುವ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಪ್ರತಿವರ್ಷ ನಡೆಸಲಾಗುವ ‘ಗ್ರೀನ್ ವಾಕಥಾನ್’ ಈ ವರ್ಷ ಸೆ. 24ರಂದು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಸಂಸ್ಥೆಯ ಹಿರಿಯ ಸಲಹೆಗಾರ ಡಾ. ಎಸ್.ಕೆ. ರಾಯ್‌ಕರ್, ಅಂದು ಬೆಳಗ್ಗೆ ನೆಹರೂ ಮೈದಾನದಿಂದ ಮಂಗಳಾ ಕ್ರೀಡಾಂಗಣದವರೆಗೆ ನಡಿಗೆ ನಡೆಯಲಿದೆ ಎಂದರು.

ಬೆಳಗ್ಗೆ 7 ಗಂಟೆಗೆ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನಡಿಗೆಗೆ ಚಾಲನೆ ನೀಡಲಿದ್ದು, 8 ಗಂಟೆಗೆ ಮಂಗಳಾ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಈ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕುವ ಮೂಲಕ ಸಾರ್ವಜನಿಕರು ಅಭಿವೃದ್ಧಿಯುತ, ಶಾಂತಿಯುತ ಹಾಗೂ ಹಸಿರು ಪರಿಸರ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಅವರು ಈ ಸಂದರ್ಭ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾರೀಸ್ ಗ್ರೂಪ್ ಟ್ರಸ್ಟಿ ಮಝರ್ ಬ್ಯಾರಿ, ಪ್ರಾಂಶುಪಾಲ ಡಾ. ಆ್ಯಂಟನಿ ಎ. ಜೆ., ಹಿರಿಯ ಸಲಹೆಗಾರ ಡಾ. ಎಸ್. ಕೆ. ರಾಯ್‌ಕರ್,  ಡಾ. ಅಬ್ದುಲ್ಲಾ ಗುಬ್ಬಿ, ಪ್ರೊ. ಮುಸ್ತಫಾ ಬಿ. ಉಪಸ್ಥಿತರಿದ್ದರು.

ಸೆ.23: ಬಿಐಟಿ ಘಟಿಕೋತ್ಸವ

ಮಂಗಳೂರಿನ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯ 5ನೆ ವಾರ್ಷಿಕ ಪದವಿ ಪ್ರದಾನ ದಿನಾಚರಣೆ (ಘಟಿಕೋತ್ಸವ) ಸೆ.23ರಂದು ಬೆಳಗ್ಗೆ 10ಗಂಟೆಗೆ ಮಂಗಳೂರಿನ ಬಿಐಟಿ ಕ್ಯಾಂಪಸ್ ನಲ್ಲಿ ನಡೆಯಲಿದೆ.

ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ ಹಾಗೂ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ಸ್ ವಿಭಾಗಗಳ ಪದವೀಧರರಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಜತೆಗೆ ಶ್ರೇಷ್ಠ ಸಾಧನೆ ಮಾಡಿದ ವಿದ್ಯಾರ್ಥಿ (ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್)ಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ.

ಎನ್ಐಟಿಕೆ, ಸುರತ್ಕಲ್ ಕರ್ನಾಟಕ ಇದರ ನಿರ್ದೇಶಕ ಡಾ. ಕೆ.ಉಮಾಮಹೇಶ್ವರ ರಾವ್ ಕಾರ್ಯಕ್ರಮ ಉದ್ಘಾಟಿಸಿ, ಭಾಷಣ ಮಾಡಲಿದ್ದಾರೆ. ಸೌದಿ ಅರೇಬಿಯಾದ ಕಿಂಗ್ ಫಹದ್ ಯುನಿವರ್ಸಿಟಿ ಆಫ್ ಪೆಟ್ರೋಲಿಯಂ ಮಿನರಲ್ಸ್‌ನ ಸೆಂಟರ್ ಫಾರ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್ ರಿಸರ್ಚ್ ಇನ್ ಸ್ಟಿಟ್ಯೂಷನ್‌ನ ನಿರ್ದೇಶಕ ಡಾ. ಸಾದಿಕ್ ಸೇಟ್ ಮುಹಮ್ಮದ್ ಘಟಿಕೋತ್ಸವ ಭಾಷಣ ಮಾಡುವರು.

ಶ್ನೈಡರ್ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಭಾರತ ಎಚ್ಆರ್ ಸರ್ವೀಸಸ್ - ಗ್ಲೋಬಲ್ ಹಬ್ ಉಪಾಧ್ಯಕ್ಷ ಶ್ರೀನಿವಾಸ ಶೂರಪಾಣಿ 'ಉದ್ಯಮ ಶೈಕ್ಷಣಿಕ ಸಂಬಂಧ' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವರು. ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್ ಇದರ ಚೇರ್ ಮೆನ್ ಸೈಯದ್ ಮುಹಮ್ಮದ್ ಬ್ಯಾರಿ ಅಧ್ಯಕ್ಷತೆ ವಹಿಸುವರು.

ಹಿರಿಯ ಸಲಹೆಗಾರ ಡಾ. ಎಸ್.ಕೆ.ರಾಯ್ಕರ್, ಬ್ಯಾರೀಸ್ ಗ್ರೂಪ್ ನ ಟ್ರಸ್ಟಿ ಮಝರ್ ಬ್ಯಾರಿ, ಪ್ರಾಂಶುಪಾಲರಾದ ಡಾ. ಆಂಟನಿ ಎ.ಜೆ.  ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News