ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ

Update: 2017-09-22 09:16 GMT

ಉಡುಪಿ, ಸೆ.22: ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಸ್ಥಾಪಿಸ ಲಾಗಿರುವ ಕರ್ನಾಟಕ ಕರಾವಳಿಯ ಏಕೈಕ ಅಟಲ್ ಟಿಂಕರಿಂಗ್ ಲ್ಯಾಬ್‌ನ ಉದ್ಘಾಟನೆಯನ್ನು ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶುಕ್ರವಾರ ನೆರವೇರಿಸಿದರು.

ಕೇಂದ್ರ ಸರಕಾರದ ಮಹಾತ್ವಕಾಂಕ್ಷೆಯ ಯೋಜನೆ ಇದಾಗಿದ್ದು, ನೀತಿ ಆಯೋಗವು 10ಲಕ್ಷ ವಿದ್ಯಾರ್ಥಿಗಳನ್ನು ಹೊಸ ಸಂಶೋಧಕರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅಟಲ್ ಇನ್ನೋವೇಶನ್ ಮಿಷನ್‌ನಡಿ ದೇಶಾದ್ಯಂತ 500 ಅಟಲ್ ಟಿಂಕರಿಂಗ್ ಲ್ಯಾಬ್‌ನ್ನು ಸ್ಥಾಪಿಸಿದೆ. ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿ ಯನ್ನು ಪರಿಗಣಿಸಿ ಶಾಲೆಯ ದಾಖಲಾತಿ ಹಾಗೂ ಫಲಿತಾಂಶವನ್ನು ಪರಿಗಣಿಸಿ ಉಡುಪಿ, ದ.ಕ. ಹಾಗೂ ಉತ್ತರ ಕನ್ನಡ ಜಿಲ್ಲೆಯ ಏಕೈಕ ಶಾಲೆಯಾಗಿ ವಳಕಾಡ ಶಾಲೆಯನ್ನು ಆಯ್ಕೆ ಮಾಡಲಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ನಿರ್ಮಲಾ ತಿಳಿಸಿದರು.

ಈ ಲ್ಯಾಬ್ ಸ್ಥಾಪನೆಗೆ ಒಟ್ಟು 10ಲಕ್ಷ ರೂ. ಅನುದಾನದಲ್ಲಿ ಮೊದಲ ಕಂತಿ ನಲ್ಲಿ ದೊರೆತ ಏಳು ಲಕ್ಷ ರೂ.ವನ್ನು ಸೆ.30ರೊಳಗೆ ವಿನಿಯೋಗಿಸಿ ವರದಿ ಸಲ್ಲಿಸ ಬೇಕಾಗಿದೆ. ಈಗಾಗಲೇ ಒಂದು ಲಕ್ಷ ರೂ. ವೆಚ್ಚದಲ್ಲಿ ಪ್ರೊಜೆಕ್ಟರ್ ಸಹಿತ ಆಡಿಯೋ ವಿಶುವಲ್ ಕೊಠಡಿ ನಿರ್ಮಾಣ, ಐದು ಲಕ್ಷ ರೂ.ಗಳ ಪೈಕಿ ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಪ್ರಯೋಗಾಲಯ ಸಲಕರಣೆಗಳನ್ನು ಖರೀದಿಸಿ, ಅಳವಡಿಸಲಾಗಿದೆ. ಮುಂದೆ ಕೇಂದ್ರ ಸರಕಾರ ವರ್ಷಕ್ಕೆ 2ಲಕ್ಷ ರೂ. ಈ ಲ್ಯಾಬ್‌ನ ನಿರ್ವಹಣೆಗೆ ನೀಡಲಿದೆ. ಅಲ್ಲದೆ ಮುಂದಿನ ಐದು ವರ್ಷಗಳ ಕಾಲ ವಿಜ್ಞಾನ ಸ್ಪರ್ಧೆ, ಕಾರ್ಯಾಗಾರವನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿ ದಿವಾಕರ ಶೆಟ್ಟಿ, ಲಯನ್ಸ್ ಕ್ಲಬ್‌ನ ಇಂದು ರಮಾನಂದ ಭಟ್, ನಗರಸಭೆ ಸದಸ್ಯೆ ಗೀತಾ ಶೇಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮೃತ್ ಶೆಣೈ, ಉಮಾದೇವಿ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News