ಮಂಗಳೂರು: ರೊಹಿಂಗ್ಯಾನ್ನರ ಪರ ಹಕ್ಕೊತ್ತಾಯ ಸಭೆ

Update: 2017-09-22 18:26 GMT

ಮಂಗಳೂರು, ಸೆ.22: ಸೈಯದ್ ಮದನಿ ಸೋಶಿಯಲ್ ಫ್ರಂಟ್ ವತಿಯಿಂದ ರೊಹಿಂಗ್ಯಾನ್ನರ ಪರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಹಕ್ಕೊತ್ತಾಯ ಸಭೆಯು ಶುಕ್ರವಾರ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೋಶಿಯಲ್ ಫ್ರಂಟ್‌ನ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಭಾರತದ ನೆರೆಯ ದೇಶವಾದ ಬರ್ಮಾದಲ್ಲಿ ರೊಹಿಂಗ್ಯಾನ್ನರು ಬದುಕುವ ಹಕ್ಕು ಕಳಕೊಂಡಿದ್ದಾರೆ. ನಿರಾಶ್ರಿತರಾದ ಅವರೀಗ ಭಾರತದಲ್ಲಿ ಆಶ್ರಯ ಪಡೆಯಲು ಬಂದಿದ್ದು, ಅವರನ್ನು ಭಯೋತ್ಪಾದಕರು ಎಂದು ಬಿಂಬಿಸಿ ಹೊರಗಟ್ಟುವ ಪ್ರಯತ್ನ ನಡೆಯುತ್ತಿದೆ. ಆದರೆ, ಇದು ಸಲ್ಲದು. ಪ್ರಧಾನಿ ನರೇಂದ್ರ ಮೋದಿ ಜಾತಿ-ಧರ್ಮ ನೋಡದೆ ಮಾನವಿಯ ನೆಲೆಯಲ್ಲಾದರೂ ಅವರಿಗೆ ರಕ್ಷಣೆ ನೀಡಬೇಕು ಮತ್ತು ಬರ್ಮಾಕ್ಕೆ ಶಾಂತಿಪಡೆ ಕಳುಹಿಸಬೇಕು ಎಂದರು.

ರೊಹಿಂಗ್ಯಾ ಮುಸ್ಲಿಮರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಕೂಡ ನಾಗರಿಕ ಸಮಾಜ ವೌನ ತಾಳಿರುವುದು ಸರಿಯಲ್ಲ. ಎಳೆಯ ಮಕ್ಕಳನ್ನು ನಿರ್ದಯದಿಂದ ಕೊಲ್ಲಲಾಗುತ್ತಿದೆ. ನಿರಾಶ್ರಿತರ ಶಿಬಿರದಲ್ಲಿರುವವನ್ನು ಯಾವ ಕಾರಣಕ್ಕೂ ಹೊರಗಟ್ಟಬಾರದು ಎಂದು ಅಬ್ದುಲ್ ರಶೀದ್ ನುಡಿದರು.
ಬದ್ರಿಯಾ ಕಾಲೇಜಿನ ಪ್ರಾಂಶುಪಾಲ ಡಾ. ಇಸ್ಮಾಯೀಲ್ ಎನ್., ಇಮಾಮ್ಸ್ ಕೌನ್ಸಿಲ್‌ನ ರಾಜ್ಯ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಎಸ್‌ಬಿ ದಾರಿಮಿ, ಉಳ್ಳಾಲ ದಅ್ಾ ಕಾಲೇಜಿನ ಪ್ರೊಫೆಸರ್ ಇಬ್ರಾಹೀಂ ಅಹ್ಸನಿ, ಫಾರೂಕ್ ಉಳ್ಳಾಲ ಮುಖ್ಯ ಭಾಷಣ ಮಾಡಿದರು.

ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಮುಹಮ್ಮದ್ ತ್ವಾಹಾ, ಯು.ಕೆ. ಸದಕತುಲ್ಲಾ, ಇಸ್ಮಾಯೀಲ್ ಪೊಡಿಮೋನು, ಯು. ಇಬ್ರಾಹೀಂ, ಉಸ್ಮಾನ್ ಕಲ್ಲಾಪು, ಖಾಲಿದ್ ಯೂಸುಫ್, ಯು.ಕೆ. ಮೋನು ಇಸ್ಮಾಯೀಲ್, ಬಾವಾ ಮುಹಮ್ಮದ್, ನೌಶಾದ್, ಅಯ್ಯೂಬ್ ಮಂಚಿಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News