ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ: 377.06 ಕೋಟಿ ವ್ಯವಹಾರ 1.21 ಕೋಟಿ ನಿವ್ವಳ ಲಾಭ ಗಳಿಕೆ

Update: 2017-09-22 11:44 GMT

ಉಳ್ಳಾಲ, ಸೆ. 22: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘವು 2016-17ನೆ ಸಾಲಿನಲ್ಲಿ ಸಂಘದ 61 ವರ್ಷಗಳ ಇತಿಹಾಸದಲ್ಲಿಯೇ ಗರಿಷ್ಠ 377.06 ಕೋಟಿ ರೂ. ಗಳ ವ್ಯವಹಾರವನ್ನು ನಡೆಸಿ 1.21 ಕೋಟಿ ನಿವ್ವಳ ಲಾಭಾಂಶ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಎ.ಮಹಮ್ಮದ್ ಬಶೀರ್‌ ಅವರು ತಿಳಿಸಿದ್ದಾರೆ.

ಸಂಘದ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿದರು. ನೋಟು ಅಪಮೌಲ್ಯದ ಮಧ್ಯೆಯು ಇಷ್ಟೊಂದು ದೊಡ್ಡ ಮೊತ್ತದ ಲಾಭಾಂಶ ಗಳಿಸಲು ಸಾಧ್ಯವಾಗಿರುವುದಕ್ಕೆ ಮತ್ತು ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಸಂಘದ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ ಮತ್ತು ಸಂಘವು ನಿರಂತರವಾಗಿ ಪ್ರಗತಿಯನ್ನು ಸಾಧಿಸುತ್ತ ಮುನ್ನಡೆಯತ್ತಿದೆ ಎಂದು ಹೇಳಿದರು.

ವರದಿ ಸಾಲಿನಲ್ಲಿ ಸಂಘವು "ಎ" ತರಗತಿಯ 8878 ಸದಸ್ಯರಿಂದ 1.28 ಪಾಲು ಬಂಡವಾಳವನ್ನು ಹೊಂದಿರುತ್ತೇವೆ. ಪ್ರಸ್ತುತ ಸಾಲಿನಲ್ಲಿ 171.89 ಕೋಟಿ ಠೇವಣಿ ಸಂಗ್ರಹವಾಗಿದ್ದು, 170.25 ಕೋಟಿ ಠೇವಣಿದಾರರಿಗೆ ಹಿಂದಕ್ಕೆ ನೀಡಿ ವರ್ಷಾಂತ್ಯಕ್ಕೆ 87.01 ಕೋಟಿ ಠೇವಣಿಯನ್ನು ಹೊಂದಿರುತ್ತದೆ.

79.49 ಕೋಟಿ ಸಾಲ ವಿತರಿಸಿದ್ದು, 78.32 ಕೋಟಿ ಸಾಲ ವಸೂಲಿಯಾಗಿರುತ್ತದೆ. ವರ್ಷಾಂತ್ಯಕ್ಕೆ 54.54 ಕೋಟಿ ಹೊರ ಬಾಕಿ ಸಾಲವಿರುತ್ತದೆ. ಸಾಲ ವಸೂಲಾತಿಯಲ್ಲಿ ಶೇ. 97% ಪ್ರಗತಿ0ುನ್ನು ಸಾಧಿಸಿರುತ್ತೇವೆ. ಸಂಘದ ಆಡಿಟ್ ವರ್ಗೀಕರಣ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ "ಎ" ತರಗತಿ0ುನ್ನು ಪಡೆದಿರುತ್ತೇವೆ. ಸಂಘದ ವಿವಿಧ ಹಣಕಾಸು ಸಂಸ್ಥೆಗಳಲ್ಲಿ 40.22 ಕೋಟಿ ರೂಗಳನ್ನು ಠೇವಣಿಯಾಗಿ ವಿನಿಯೋಗಿಸಿರುತ್ತೇವೆ.

ಸಂಘವು ವರದಿ ಸಾಲಿನಲ್ಲಿ ಸೋಮೇಶ್ವರ ಗ್ರಾಮದ ಕುತ್ತಾರು ಪದವು ಎಂಬಲ್ಲಿ ಸಂಪೂರ್ಣ ಗಣಕೀಕೃತ ಶಾಖೆಯು ಪ್ರಾರಂಭಗೊಂಡಿರುತ್ತದೆ. ಸಂಘವು ನಿರಂತರವಾಗಿ ಹಲವು ವರ್ಷಗಳಿಂದ ತನ್ನ ಷೇರುದಾರರಿರಿಗೆ ಶೇ 25% ಡಿವಿಡೆಂಡ್ ನೀಡುತ್ತ ಬಂದಿರುತ್ತೇವೆ. ಈ ಬಾರಿ0ುೂ ಶೇ 25% ಡಿವಿಡೆಂಡು ನೀಡಲು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಮಂಜೂರಾತಿಗಾಗಿ 24-09-2017ರಂದು ನಡೆಯುವ ಮಹಾಸಭೆಯ ಮುಂದೆ ಮಂಡಿಸಲಾಗುವುದು. ಜಿಲ್ಲೆಯಲ್ಲಿಯೇ ಷೇರುದಾರ ಸದಸ್ಯರಿಗೆ ಶೇ 25% ಡಿವಿಡೆಂಡ್ ನೀಡುವ ಏಕೈಕ ಸಂಘ ನಮ್ಮದಾಗಿರುತ್ತದೆ. ಕರ್ನಾಟಕ ರಾಜ್ಯ ಸರಕಾರ ಜಾರಿ ಮಾಡಿದ ಸಾಲ ಮನ್ನಾ ಯೋಜನೆಯಲ್ಲಿ ನಮ್ಮ ಸಂಘದಿಂದ 463 ಕೃಷಿ ಸಾಲಗಾರ ಸದಸ್ಯರ 2.12 ಕೋಟಿ ರೂಗಳ ಪ್ರಸ್ತಾವನೆಯನ್ನು ಕಳುಹಿಸಿ ಕೊಡಲಾಗಿದೆ ಎಂದು ಅವರು ಹೇಳಿದರು.

ಸಂಘದ ಪ್ರಧಾನ ಕಚೇರಿಯ ನೂತನ ಕಟ್ಟಡ ಉದ್ಘಾಟನೆ:   ಸಂಘದ ಪ್ರಧಾನ ಕಚೇರಿಯ ಈ ಹಿಂದಿನ ಕಟ್ಟಡವು ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣಕ್ಕೆ ಹೋಗಿರುವುದರಿಂದ ಪ್ರಸ್ತುತ ನೂತನ ಕಟ್ಟಡವು ಅಂದಾಜು 75 ಲಕ್ಷದಲ್ಲಿ ಸಿದ್ಧವಾಗಿದ್ದು ಅ. 8ರಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ. ಉದ್ಘಾಟಿಸಲಿದ್ದಾರೆ. ಬ್ಯಾಂಕಿಂಗ್ ವಿಭಾಗವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ, ಭದ್ರತಾ ಕೋಶವನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ. ಎಮ್. ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ನಡೆಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾದ ಎಂ. ಎ. ಮಹಮ್ಮದ್ ಬಶೀರ್ ವಹಿಸಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಪದ್ಮಾವತಿ ಎಸ್. ಶೆಟ್ಟಿ, ನಿರ್ದೇಶಕರಾದ ಗಂಗಾಧರ ಉಳ್ಳಾಲ್, ಕೃಷ್ಣಪ್ಪ ಸಾಲಿಯಾನ್, ಉದಯ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಉಳ್ಳಾಲ್, ಗಣೇಶ್ ಶೆಟ್ಟಿ "ರಕ್ಷ" ತಲಪಾಡಿ, ನಾರಾಯಣ ತಲಪಾಡಿ, ಮುಖ್ಯ  ಕಾರ್ಯ ನಿರ್ವಹಣಾಧಿಕಾರಿ ವೇಣುಗೋಪಾಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News