ಆಸ್ತಿ ವಿವರ ಘೋಷಿಸದ 77 ಕೇಂದ್ರ ಸಚಿವರು: ಮೋದಿ ಆಸ್ತಿಯ ಮೊತ್ತ 2 ಕೋಟಿ ರೂ.

Update: 2017-09-22 14:56 GMT

ಹೊಸದಿಲ್ಲಿ, ಸೆ.22: ಸಚಿವ ಸಂಪುಟದ ಎಲ್ಲಾ ಸಚಿವರು ಪ್ರತೀ ವರ್ಷದ ಆಗಸ್ಟ್ 31ರವರೆಗೆ ತಮ್ಮ ಆಸ್ತಿ ಮತ್ತು ಸಾಲದ ವಿವರನ್ನು ನೀಡುವ ಮೂಲಕ ಪಾರದರ್ಶಕತೆ ಪ್ರದರ್ಶಿಸಬೇಕು ಹಾಗೂ ವ್ಯವಸ್ಥಿತ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಇದು ನೆರವಾಗಲಿದೆ ಎಂದು ಪ್ರಧಾನಿ ಸೂಚಿಸಿದ್ದರು. ಆದರೆ ಕೇಂದ್ರ ಸಚಿವ ಸಂಪುಟದ 92 ಸಚಿವರ ಪೈಕಿ ಕೇವಲ 15 ಸಚಿವರಷ್ಟೇ ಈ ವರ್ಷ ತಮ್ಮ ಆಸ್ತಿಯ ವಿವರ ನೀಡಿದ್ದಾರೆ.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭ ತಾನು ಜಾರಿಗೆ ತಂದಿರುವ ನಿಯಮವನ್ನು ಪಾಲಿಸಿರುವ ಪ್ರಧಾನಿ ನರೇಂದ್ರ ಮೋದಿ, ಸರಕಾರದ ವೆಬ್‌ಸೈಟ್‌ನಲ್ಲಿ ತನ್ನ ಆಸ್ತಿಯ ವಿವರವನ್ನು ನೀಡಿದ್ದು, ಒಟ್ಟು 2 ಕೋಟಿ ರೂ. ಮೊತ್ತದ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

 ಆಸ್ತಿ ವಿವರ ಘೋಷಿಸದ ಸಚಿವರಲ್ಲಿ ಪಿಯೂಷ್ ಗೋಯಲ್, ಸ್ಮತಿ ಇರಾನಿ, ಮೇನಕಾ ಗಾಂಧಿ ಹಾಗೂ ರವಿಶಂಕರ್ ಪ್ರಸಾದ್ ಸೇರಿದ್ದಾರೆ.

  ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಸಹಾಯಕ ಗೃಹ ಸಚಿವ ಕಿರಣ್ ರಿಜಿಜು ಕೂಡಾ ಆಸ್ತಿ ವಿವರ ನೀಡಿಲ್ಲ. ಕಳೆದ ಎರಡು ವರ್ಷ ನಿಯಮವನ್ನು ಪಾಲಿಸಿದ್ದೇವೆ. ಈ ವರ್ಷವೂ ಶೀಘ್ರ ಆಸ್ತಿ ವಿವರ ನೀಡುತ್ತೇವೆ. ಆಸ್ತಿ ಹಾಗೂ ನಿರಖು ಠೇವಣಿಯ ವಿವರ ಸಂಗ್ರಹಿಸುವಾಗ ಸ್ವಲ್ಪ ವಿಳಂಬವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ವಿವಿಧ ಇಲಾಖೆಯ ಸಚಿವರಿಂದ ಆಸ್ತಿ ವಿವರದ ಮಾಹಿತಿ ಸಂಗ್ರಹಿಸಿ ಅದನ್ನು ವೆಬ್‌ಸೈಟ್‌ನಲ್ಲಿ ಪ್ರದರ್ಶಿಸುವ ಕಾರ್ಯದ ಸಮನ್ವಯತೆ ಸಾಧಿಸುವ ಹೊಣೆ ಗೃಹ ಇಲಾಖೆಯದ್ದಾಗಿದೆ. ಸಚಿವರು ತಮ್ಮ ಕುಟುಂಬ ಸದಸ್ಯರ ಹಣಕಾಸಿನ ವಿವರವನ್ನೂ ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News