ರೊಹಿಂಗ್ಯನ್ನರು ಭಾರತ ಪ್ರವೇಶಿಸದಂತೆ ತಡೆಯಲು ಮೆಣಸಿನ ಹುಡಿ ಗ್ರೆನೇಡ್ ಬಳಕೆ

Update: 2017-09-22 16:41 GMT

ಹೊಸದಿಲ್ಲಿ, ಸೆ. 22: ತಾಯ್ನಾಡಾದ ಮ್ಯಾನ್ಮಾರ್‌ನ ಹಿಂಸಾಚಾರದಿಂದ ವಲಸೆ ಬರುತ್ತಿರುವ ರೊಹಿಂಗ್ಯಾ ಮುಸ್ಲಿಮರು ಭಾರತ ಪ್ರವೇಶಿಸದಂತೆ ತಡೆಯಲು ಬಾಂಗ್ಲಾದೇಶದ ಗಡಿಯಲ್ಲಿ ಮೆಣಸಿನ ಹುಡಿ ಹಾಗೂ ಎಚ್ಚರತಪ್ಪಿಸುವ ಗ್ರೆನೇಡ್‌ಗಳನ್ನು ಬಳಸಲು ಸೇನಾ ಪಡೆ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವರಿಗೆ ಗಂಭೀರ ಘಾಸಿ ಮಾಡುವುದಿಲ್ಲ ಅಥವಾ ಅವರನ್ನು ಬಂಧಿಸುವುದಿಲ್ಲ. ಆದರೆ, ಭಾರತದ ಮಣ್ಣಲ್ಲಿ ರೊಹಿಂಗ್ಯಾರನ್ನು ಸಹಿಸಲಾರೆವು ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.

ಭಾರತಕ್ಕೆ ಪ್ರವೇಶಿಸುವ ನೂರಾರು ರೊಹಿಂಗ್ಯರನ್ನು ತಡೆಯಲು ನಾವು ಮೆಣಸಿನ ಹುಡಿ ಹೊಂದಿರುವ ಗ್ರೆನೇಡ್‌ಗಳನ್ನು ಬಳಸಲಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ರೊಹಿಂಗ್ಯಾರನ್ನು ಹೊರದಬ್ಬಲು ಮೆಣಸಿನ ಹುಡಿಯ ಗ್ರೆನೇಡ್ ಹಾಗೂ ಎಚ್ಚರತಪ್ಪಿಸುವ ಗ್ರೆನೇಡ್‌ಗಳನ್ನು ಸೇನೆ ಬಳಸಲಿದೆ ಎಂದು ಪಶ್ಚಿಮ ಬಂಗಾಳದ ಪೂರ್ವ ರಾಜ್ಯದ ವಿಶಾಲ ಭಾಗದಲ್ಲಿ ಗಸ್ತು ನಡೆಸುತ್ತಿರುವ ಗಡಿ ಭದ್ರತಾ ಪಡೆಯ ಡಿಐಜಿ ಆರ್.ಪಿ.ಎಸ್. ಜಸ್ವಾಲ್ ತಿಳಿಸಿದ್ದಾರೆ.

ತೀವ್ರ ಕಿರಿಕಿರಿಯಾಗಲು ಹಾಗೂ ಅವರು ತಾತ್ಕಾಲಿಕವಾಗಿ ಚಲಿಸದಿರಲು ನೈಸರ್ಗಿಕವಾಗಿ ಸಿಗುವ ಮೆಣಸಿನ ಪುಡಿ ಬಳಸಿ ಗ್ರೆನೆಡ್ ರೂಪಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News