ಗಾಂಧಿ, ನೆಹರು, ಅಂಬೇಡ್ಕರ್ ಅನಿವಾಸಿ ಭಾರತೀಯರು: ರಾಹುಲ್ ಗಾಂಧಿ

Update: 2017-09-22 17:31 GMT

ನ್ಯೂಯಾರ್ಕ್, ಸೆ. 22: ಭಾರತ ಸ್ವಾತಂತ್ರ ಸಂಗ್ರಾಮದ ಪ್ರಮುಖ ನಾಯಕರು ಅನಿವಾಸಿ ಭಾರತೀಯ (ಎನ್‌ಆರ್‌ಐ)ರಾಗಿದ್ದಾರೆ ಹಾಗೂ ‘ಅನಿವಾಸಿ ಭಾರತೀಯ ಚಳವಳಿ’ಯಿಂದಲೇ ಕಾಂಗ್ರೆಸ್ ಪಕ್ಷ ಜನಿಸಿದೆ ಎಂದು ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

‘‘ಮೂಲ ಕಾಂಗ್ರೆಸ್ ಚಳವಳಿ ಎನ್‌ಆರ್‌ಐ ಚಳವಳಿಯಾಗಿದೆ. ಮಹಾತ್ಮಾ ಗಾಂಧಿ ಓರ್ವ ಅನಿವಾಸಿ ಭಾರತೀಯರಾಗಿದ್ದರು, ಜವಾಹರಲಾಲ್ ನೆಹರು ಇಂಗ್ಲೆಂಡ್‌ನಿಂದ ವಾಪಸ್ ಬಂದವರು ಹಾಗೂ ಅಂಬೇಡ್ಕರ್, ಆಝಾದ್ ಮತ್ತು ಪಟೇಲ್ ಇವರೆಲ್ಲರೂ ಎನ್‌ಆರ್‌ಐಗಳಾಗಿದ್ದರು’’ ಎಂದು ಗುರುವಾರ ಇಲ್ಲಿ ಕಾಂಗ್ರೆಸ್ ಪಕ್ಷದ ಸುಮಾರು 2,000 ಎನ್‌ಆರ್‌ಐ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

‘‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಇವರೆಲ್ಲರೂ ಹೊರಜಗತ್ತಿಗೆ ಹೋದರು, ಹೊರಜಗತ್ತನ್ನು ಕಂಡರು, ಭಾರತಕ್ಕೆ ಮರಳಿದರು ಹಾಗೂ ತಮ್ಮ ಅನುಭವಗಳನ್ನು ಬಳಸಿ ಭಾರತವನ್ನು ಪರಿವರ್ತಿಸಿದರು’’ ಎಂದು ರಾಹುಲ್ ಗಾಂಧಿ ವಿವರಿಸಿದರು.

ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಭಾರತದ ಬೆನ್ನೆಲುಬು ಎಂಬುದಾಗಿ ಅವರು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News