ಇರಾನ್: 2,000 ಕಿ.ಮೀ. ವ್ಯಾಪ್ತಿಯ ಕ್ಷಿಪಣಿ ಅನಾವರಣ

Update: 2017-09-22 17:56 GMT

ಲಂಡನ್, ಸೆ. 22: ಹಲವಾರು ಸಿಡಿತಲೆಗಳನ್ನು ಒಯ್ಯುವ ಸಾಮರ್ಥ್ಯವಿರುವ ಹಾಗೂ 2,000 ಕಿ.ಮೀ. ವ್ಯಾಪ್ತಿಯ ನೂತನ ಪ್ರಕ್ಷೇಪಕ ಕ್ಷಿಪಣಿಯೊಂದನ್ನು ಇರಾನ್ ಅನಾವರಣಗೊಳಿಸಿದೆ ಎಂದು ತಸ್ನೀಮ್ ವಾರ್ತಾ ಸಂಸ್ಥೆ ಶುಕ್ರವಾರ ವರದಿ ಮಾಡಿದೆ.

ಟೆಹರಾನ್‌ನಲ್ಲಿ ನಡೆದ ಸೇನಾ ಪರೇಡೊಂದರ ನೇಪಥ್ಯದಲ್ಲಿ ಇರಾನ್ ಸೇನೆ ರೆವಲೂಶನರಿ ಗಾರ್ಡ್ಸ್‌ನ ವಾಯು ವಿಭಾಗದ ಮುಖ್ಯಸ್ಥ ಅಮಿರಾಲಿ ಹಜಿಝಾದೆ ಈ ವಿಷಯವನ್ನು ತಿಳಿಸಿದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News