ಮನುಷ್ಯ ಶರೀರಕ್ಕೆ 400 ವರ್ಷ ಜೀವಿಸುವ ಸಾಮರ್ಥ್ಯ ಇದೆ: ಬಾಬಾ ರಾಮ್‍ದೇವ್

Update: 2017-09-23 09:13 GMT

ಹೊಸದಿಲ್ಲಿ,ಸೆ.23: ಮನುಷ್ಯ ಶರೀರವನ್ನು 400ವರ್ಷಗಳ ಕಾಲ ಬದುಕುವ ರೀತಿಯಲ್ಲಿ ರೂಪಿಸಲಾಗಿದೆ. ಆದರೆ, ತಪ್ಪಾದ ಜೀವನ ಕ್ರಮದಿಂದಾಗಿ ಆಯಸ್ಸು ಕಡಿಮೆಯಾಗುತ್ತಿದೆ ಎಂದು ಯೋಗ ಗುರು ಬಾಬಾರಾಮ್‍ದೇವ್ ಹೇಳಿದ್ದಾರೆ.

ಸಮೀಕೃತ ಆಹಾರ, ಸ್ಥಿರವಾದ ವ್ಯಾಯಾಮ ಮಾಡಿದರೆ ರೋಗವನ್ನು ತಡೆದು ಆರೋಗ್ಯಪೂರ್ಣವಾಗಿ ಜೀವಿಸಲು ಸಾಧ್ಯವಿದೆ ಎಂದು ಅವರು ಹೇಳಿದರು. ಶರೀರವನ್ನು ಶೋಷಣೆ ನಡೆಸುವ ಮೂಲಕ ನಮ್ಮ ಆಯಸ್ಸು ಕಡಿಮೆಯಾಗುತ್ತದೆ. ಹೃದ್ರೋಗ, ರಕ್ತದೊತ್ತಡದಂತಹ ರೋಗಗಳನ್ನು ನಾವು ಈ ರೀತಿ ಆಹ್ವಾನಿಸುತ್ತೇವೆ. ಆರೋಗ್ಯಕ್ಕಾಗಿ ಯೋಗ ಮಾಡಬೇಕೆಂದು ಅವರು ಹೇಳಿದರು. ಆಹಾರವನ್ನು ನಿಯಂತ್ರಿಸಿ ಆರೋಗ್ಯವನ್ನು ಕಾಪಾಡಿಕೊಂಡಿರುವುದಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ಅವರು ಉದಾಹರಣೆ ನೀಡಿದರು.

ಆಹಾರ ನಿಯಂತ್ರಣದ ಮೂಲಕ 38 ಕಿಲೊಗ್ರಾಂ ಭಾರವನ್ನು ಅವರು ಕಡಿಮೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನದ ಆಹಾರದಲ್ಲಿ ನಿಯಂತ್ರಣದೊಂದಿಗೆ ರಾತ್ರಿಯ ಆಹಾರವಾಗಿ ಹಣ್ಣು,ತರಕಾರಿಸೂಪುಗಳನ್ನು ಮಿತವಾಗಿ ಸೇವಿಸಬೇಕು. ಆರುಗಂಟೆ ನಿದ್ರಿಸಬೇಕು, ಒಂದು ಗಂಟೆ ವ್ಯಾಯಾಮ, ಸಮೀಕೃತ ಆಹಾರ ಇದು ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಿರುವ ದಾರಿಯಾಗಿದೆ. ರೋಗಪ್ರತಿರೋಧಕ ಶಕ್ತಿ ಕಡಿಮೆಯಾಗುವುದು ಕ್ಯಾನ್ಸರ್‍ನಂತಹ ಮಾರಕ ರೋಗಗಳಿಗೆ ಕಾರಣವಾಗುತ್ತಿದೆ. ಯೋಗದಂತವುಗಳನ್ನು ಅಭ್ಯಾಸ ಮಾಡಿಕೊಂಡರೆ ರೋಗವನ್ನು ದೂರವಿಡಬಹುದು ಎಂದುಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News