×
Ad

ಚಲಿಸುತ್ತಿರುವ ಕಾರಿನಲ್ಲಿ ಮಹಿಳೆಯ ಅತ್ಯಾಚಾರ

Update: 2017-09-23 22:07 IST

ನೊಯ್ಡ, ಸೆ. 23: ಚಲಿಸುತ್ತಿರುವ ಕಾರಿನಲ್ಲಿ 24 ವರ್ಷದ ಮಹಿಳೆಯೋರ್ವಳನ್ನು ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಎಸಗಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಸುಮಾರು 6:30ರ ಹೊತ್ತಿಗೆ ನೊಯ್ಡಿದ ಗಾಲ್ಫ್ ಕೋರ್ಸ್ ಮೆಟ್ರೋ ಸ್ಟೇಷನ್‌ನ ಸಮೀಪ ಯುವತಿ ಆಟೋ ರಿಕ್ಷಾಕ್ಕಾಗಿ ಕಾಯುತ್ತಿದ್ದರು. ಆಗ ಇಬ್ಬರು ವ್ಯಕ್ತಿಗಳು ಮಹೀಂದ್ರಾ ಸ್ಕಾರ್ಪಿಯೊದಲ್ಲಿ ಆಗಮಿಸಿದರು. ತಾವು ಕೂಡ ಅತ್ತ ಕಡೆ ಹೋಗುವುದಾಗಿ ಹೇಳಿ ಯುವತಿಯನ್ನು ಬಲವಂತವಾಗಿ ಒಯ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳು ದಿಲ್ಲಿ ಹಾಗೂ ನೊಯ್ದಾದ ಮೂಲಕ ವಿವಿಧ ಪ್ರದೇಶಗಳಿಗೆ ಕಾರಿನಲ್ಲೇ ಸಂಚರಿಸುತ್ತಲೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆನಂತರ ರಾತ್ರಿ 2 ಗಂಟೆ ಗೆ ದಿಲ್ಲಿಯ ಅಕ್ಷರಧಾಮ ದೇವಾಲಯದಲ್ಲಿ ಮಹಿಳೆಯನ್ನು ಎಸೆದು ಹೋಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದಾದಿ ಮೇಲೆ ಸಾಮೂಹಿಕ ಅತ್ಯಾಚಾರ

ದುಷ್ಕರ್ಮಿಗಳ ಗುಂಪೊಂದು ದಾದಿಯೊಬ್ಬರನ್ನು ಸಾಮೂಹಿಕ ಅತ್ಯಾಚಾರಗೈದು ಅವರಲ್ಲಿದ್ದ ಹಣವನ್ನು ಲೂಟಿಗೈದ ಘಟನೆ ಶುಕ್ರವಾರ ಗಾಝಿಯಾಬಾದ್‌ನಲ್ಲಿ ಸಂಭವಿಸಿದೆ.

ಸಿಹಾನಿ ಗೇಟ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ 9:30ರ ಹೊತ್ತಿಗೆ ಈ ಘಟನೆ ನಡೆದಿದೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸಲು ತಂಡವೊಂದನ್ನು ರೂಪಿಸಲಾಗಿದೆ ಎಂದು ಗಾಝಿಯಾಬಾದ್ ಪೊಲೀಸ್ ಅಧೀಕ್ಷಕರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News