ರೊಹಿಂಗ್ಯಾರಿಗೆ ಮೊಬೈಲ್ ಸಂಪರ್ಕ ನಿಷೇಧ: ಬಾಂಗ್ಲಾದೇಶ ಆದೇಶ

Update: 2017-09-24 15:45 GMT

ಕಾಕ್ಸ್ ಬಝಾರ್ (ಬಾಂಗ್ಲಾದೇಶ), ಸೆ. 24: ದೂರಸಂಪರ್ಕ ಕಂಪೆನಿಗಳು ರೊಹಿಂಗ್ಯಾ ನಿರಾಶ್ರಿತರಿಗೆ ಮೊಬೈಲ್ ಫೋನ್ ಸಂಪರ್ಕಗಳನ್ನು ನೀಡುವುದನ್ನು ಬಾಂಗ್ಲಾದೇಶ ನಿಷೇಧಿಸಿದೆ. ಭದ್ರತಾ ಕಳವಳಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ನಿಷೇಧ ಜಾರಿಯಲ್ಲಿರುವ ಅವಧಿಯಲ್ಲಿ ಬಾಂಗ್ಲಾದೇಶದ ನಾಲ್ಕು ಮೊಬೈಲ್ ಸೇವೆ ಪೂರೈಕೆದಾರ ಕಂಪೆನಿಗಳು ರೊಹಿಂಗ್ಯಾ ನಿರಾಶ್ರಿತರಿಗೆ ಮೊಬೈಲ್ ಸಂಪರ್ಕಗಳನ್ನು ನೀಡಿದರೆ ಅವುಗಳಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಮ್ಯಾನ್ಮಾರ್‌ನಲ್ಲಿ ಆಗಸ್ಟ್ 25ರಂದು ಹೊಸದಾಗಿ ಹಿಂಸಾಚಾರ ಭುಗಿಲೆದ್ದ ಬಳಿಕ ಸುಮಾರು 4.3 ಲಕ್ಷ ರೊಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

‘‘ಸದ್ಯಕ್ಕೆ ಅವರು (ರೊಹಿಂಗ್ಯಾ ನಿರಾಶ್ರಿತರು) ಸಿಮ್ ಕಾರ್ಡ್‌ಗಳನ್ನು ಖರೀದಿಸುವಂತಿಲ್ಲ’’ ಎಂದು ದೂರಸಂಪರ್ಕ ಸಚಿವಾಲಯದಲ್ಲಿ ಹಿರಿಯ ಅಧಿಕಾರಿಯಾಗಿರುವ ಇನಾಯತ್ ಹುಸೈನ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ದೇಶದಲ್ಲೇ ಬೆಳೆದಿರುವ ಭಯೋತ್ಪಾದಕರ ಸಂಘಟನಾ ಸಾಮರ್ಥ್ಯವನ್ನು ಕುಗ್ಗಿಸುವ ಕ್ರಮವಾಗಿ, ಅಧಿಕೃತ ಗುರುತು ಚೀಟಿಗಳನ್ನು ನೀಡದ ತನ್ನದೇ ನಾಗರಿಕರಿಗೆ ಸಿಮ್ ಕಾರ್ಡ್‌ಗಳನ್ನು ನೀಡುವುದನ್ನು ಬಾಂಗ್ಲಾದೇಶ ಈಗಾಗಲೇ ನಿಷೇಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News