ಮೆಕ್ಸಿಕೊದಲ್ಲಿ ಇನ್ನೊಂದು ಭೂಕಂಪ

Update: 2017-09-24 16:27 GMT

ಮೆಕ್ಸಿಕೊ, ಸೆ. 24: ಮೆಕ್ಸಿಕೊದ ಪಶ್ಚಿಮ ಕರಾವಳಿಯಲ್ಲಿ ರವಿವಾರ ಇನ್ನೊಂದು ಭೂಕಂಪ ಸಂಭವಿಸಿದೆ. ಅದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.9ರಷ್ಟಿತ್ತು ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ.

ಭೂಕಂಪದ ಕೇಂದ್ರ ಬಿಂದು ಚಿಯಾಪಸ್ ರಾಜ್ಯದ ಟೊನಾಲದ ನೈರುತ್ಯಕ್ಕೆ 99 ಕಿ.ಮೀ. ದೂರದಲ್ಲಿತ್ತು.

ಮಂಗಳವಾರ ಸಂಭವಿಸಿದ 7.1ರ ತೀವ್ರತೆಯ ಭೀಕರ ಭೂಕಂಪದಲ್ಲಿ ರಾಜಧಾನಿ ಮೆಕ್ಸಿಕೊ ಸಿಟಿ ಛಿದ್ರವಾಗಿದೆ. ಆ ಭೂಕಂಪದಲ್ಲಿ ಡಝನ್‌ಗಟ್ಟಲೆ ಕಟ್ಟಡಗಳು ನೆಲಕ್ಕುರುಳಿವೆ ಹಾಗೂ ಕನಿಷ್ಠ 307 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News