ಹಾರುತ್ತಿದ್ದ ವಿಮಾನದಿಂದ ಬಿದ್ದ ಅಡ್ಡಪಟ್ಟಿ; ಕಾರಿನ ಗಾಜು ಪುಡಿ

Update: 2017-09-24 16:47 GMT

ಟೋಕಿಯೊ, ಸೆ. 24: ಜಪಾನ್‌ನ ಕನ್ಸಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿದ ಸ್ವಲ್ಪವೇ ಹೊತ್ತಿನಲ್ಲಿ ನೆದರ್‌ಲ್ಯಾಂಡ್‌ನ ವಿಮಾನವೊಂದರಿಂದ ಅಡ್ಡಪಟ್ಟಿಯೊಂದು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದರ ಮೇಲೆ ಬಿದ್ದಿದೆ.

ಸುಮಾರು 4.3 ಕೆಜಿ ತೂಗುವ ಫಲಕ ಬಿದ್ದಾಗ ಕಾರಿನ ಕಿಟಿಕಿ ಗಾಜು ಒಡೆದಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಆದರೆ, ತನಿಖೆ ನಡೆಸುವುದಕ್ಕಾಗಿ ವಿಮಾನ ನಿಲ್ದಾಣ ಅಧಿಕಾರಿಗಳು ಸುರಕ್ಷಾ ಇನ್ಸ್‌ಪೆಕ್ಟರ್‌ಗಳನ್ನು ಪಶ್ಚಿಮ ಒಸಾಕ ನಗರಕ್ಕೆ ಕಳುಹಿಸಿಕೊಡಲಿದ್ದಾರೆ. ಎಂದು ಎನ್‌ಎಚ್‌ಕೆ ಟಿವಿ ಚಾನೆಲ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News