×
Ad

ಕೇರಳದಲ್ಲಿ ಕ್ಷೀರ ಕ್ರಾಂತಿಗೆ ಗೋರಕ್ಷಕರ ಅಡ್ಡಿ: ಸಚಿವ ಕೆ. ರಾಜು

Update: 2017-09-24 23:08 IST

ತಿರುವನಂತಪುರ, ಸೆ. 23: ಗೋರಕ್ಷಣೆ ನೆಪದಲ್ಲಿ ನಡೆಯುತ್ತಿರುವ ಹಿಂಸಾಚಾರ ಕೇರಳದಲ್ಲಿ ಹಾಲು ಉತ್ಪಾದನೆಯಲ್ಲಿ ಸ್ವಾವಲಂಬನ ಸಾಧಿಸುವ ಯೋಜನೆಗೆ ಅಡ್ಡಿ ಉಂಟು ಮಾಡುತ್ತಿದೆ ಎಂದು ಕೇರಳ ರಾಜ್ಯದ ಹೈನುಗಾರಿಕೆ ಸಚಿವರು ಹೇಳಿದ್ದಾರೆ.

ಗೋರಕ್ಷಕರ ಹಾವಳಿಯಿಂದ ಗುಜರಾತ್‌ನಿಂದ ಅತ್ಯುತ್ತಮ ಹಾಲು ನೀಡುವ 200 ಗಿರ್ ಹಸುಗಳನ್ನು ರಾಜ್ಯಕ್ಕೆ ತರುವ ಯೋಜನೆಯನ್ನು ರದ್ದುಗೊಳಿಸಲಾಗಿದೆ ಎಂದು ರಾಜ್ಯ ಅರಣ್ಯ ಹಾಗೂ ಹೈನುಗಾರಿಕೆ ಸಚಿವ ಕೆ. ರಾಜು ಹೇಳಿದ್ದಾರೆ.

 ಹಾಲು ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಗಿರ್ ಹಸುಗಳನ್ನು ಗುಜರಾತ್‌ನಿಂದ ತರಲು ಕೇರಳ ಸರಕಾರ ನಿರ್ಧರಿಸಿತ್ತು. ಗೋರಕ್ಷಣೆ ಹೆಸರಲ್ಲಿ ಹಿಂಸಾಚಾರ ನಡೆಸುತ್ತಿರುವುದರಿಂದ ಇದು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

 ಗುಜರಾತ್‌ನಿಂದ ಗೋವುಗಳನ್ನು ತರುವ ಯೋಜನೆಯನ್ನು ನಾವು ಕೈಬಿಟ್ಟಿಲ್ಲ. ಇದು ಪರಿಗಣನೆಯಲ್ಲಿ ಇದೆ. ಆದರೆ, ಸಾಗಾಟದ ಸಂದರ್ಭ ಗೋರಕ್ಷಕರಿಂದ ಬೆದರಿಕೆ ಇರುವುದರಿಂದ ತಾತ್ಕಾಲಿಕವಾಗಿ ತಡೆ ಹಿಡಿದಿದ್ದೇವೆ ಎಂದು ಕೆ. ರಾಜು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News