ಜನಿಸಿದ 6 ನಿಮಿಷಗಳಲ್ಲಿ ಆಧಾರ್ ಕಾರ್ಡ್ ಪಡೆದ ಶಿಶು
Update: 2017-09-24 23:20 IST
ಉಸ್ಮಾನಾಬಾದ್, ಸೆ. 23: ಆಧಾರ್ ಕಾರ್ಡ್ ಪಡೆಯಲು ಸರತಿ ಸಾಲಿನ ನಿಲ್ಲಬೇಕು. ಆದರೆ, ಭಾವನಾ ಸಂತೋಷ್ ಜಾಧವ್ ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಯಾವುದೇ ಕಿರಿಕಿರಿ ಇಲ್ಲದೆ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾಳೆ.
ಉಸ್ಮಾನಾಬಾದ್ ಜಿಲ್ಲಾ ಮಹಿಳೆಯರ ಆಸ್ಪತ್ರೆಯಲ್ಲಿ ರವಿವಾರ ಅಪರಾಹ್ನ 12.03ಕ್ಕೆ ಭಾವನಾ ಜನಿಸಿದಳು. ಜನಿಸಿದ 6 ನಿಮಿಷಗಳ ಬಳಿಕ ಅಂದರೆ ಅಪರಾಹ್ನ 12.09ಕ್ಕೆ ಆಕೆ ಆಧಾರ್ ನಂಬರ್ ಪಡೆದಳು.
ಶಿಶುವಿನ ಹೆತ್ತವರು ಆಧಾರ್ ನಂಬರ್‌ಗಾಗಿ ನೋಂದಣಿ ಮಾಡಿದರು. ಯುಐಡಿಎಐಯಿಂದ ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರ ದೊರೆಯಿತು ಎಂದು ಜಿಲ್ಲಾಧಿಕಾರಿ ರಾಧಾಕೃಷ್ಣನ್ ಗಮೆ ಹೇಳಿದ್ದಾರೆ.
ನವಜಾತ ಶಿಶು ಹಾಗೂ ತಾಯಿ ಆರೋಗ್ಯದಿಂದಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ವೈದ್ಯ ಡಾ. ಏಕಾಂತ್ ಮಾಲೆ ತಿಳಿಸಿದ್ದಾರೆ.