×
Ad

ವಿತರಣಾ ಸಂಸ್ಥೆ ಈ ರೈತನಿಗೆ ಕಳುಹಿಸಿದ ವಿದ್ಯುತ್ ಬಿಲ್ ಮೊತ್ತ ಎಷ್ಟು ಗೊತ್ತೆ?

Update: 2017-09-24 23:39 IST

ರಾಯ್‌ಪುರ್, ಸೆ. 24: ರಾಜ್ಯ ವಿದ್ಯುತ್ ವಿತರಣಾ ಸಂಸ್ಥೆಯ ಸೆಪ್ಟಂಬರ್‌ನ ವಿದ್ಯುತ್ ಬಿಲ್ ನೋಡಿ ಚತ್ತೀಸ್‌ಗಢದ ಮಹಾಸಮುಂದ್‌ನ ರೈತ ಆಘಾತಕ್ಕೊಳಗಾಗಿದ್ದಾರೆ. ಯಾಕೆಂದರೆ ಸಂಸ್ಥೆ ಬರೋಬ್ಬರಿ 76.73 ಕೋಟಿ ರೂ. ಬಿಲ್ ಕಳುಹಿಸಿದೆ.

“ನಾನು ಇದನ್ನು ನಂಬಲಾರೆ. ನಮ್ಮದು ಮನೆ ಬಳಕೆಯ ವಿದ್ಯುತ್ ಸಂಪರ್ಕ” ಎಂದು ರಾಮ್ ಪ್ರಸಾದ್ ಹೇಳಿದ್ದಾರೆ.

ಈ ಬಿಲ್ ಅನ್ನು ಅವರು ಈ ತಿಂಗಳ ಅಂತ್ಯದ ಒಳಗೆ ಪಾವತಿಸಬೇಕು. ರಾಮ್ ಪ್ರಸಾದ್ ಅವರು ವಿದ್ಯುತ್ ಇಲಾಖೆಗೆ ದೂರು ನೀಡಿದ್ದಾರೆ. ಇದು ತಾಂತ್ರಿಕ ದೋಷದಿಂದ ಉಂಟಾಗಿದೆ ಎಂದು ವಿದ್ಯುತ್ ಕಂಪೆನಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News