ಬಿಎಚ್‌ಯು ಪ್ರಕರಣ : ತನಿಖಾ ಸಮಿತಿ ರಚನೆ
Update: 2017-09-25 19:35 IST
ಲಕ್ನೊ, ಸೆ.25: ವಿದ್ಯಾರ್ಥಿನಿಯನ್ನು ಚುಡಾಯಿಸಿದ ಪ್ರಕರಣದ ಬಳಿಕ ಬನಾರಸ್ ಹಿಂದು ವಿವಿಯ ಆವರಣದಲ್ಲಿ ನಡೆದ ಘಟನೆಗಳ ಕುರಿತು ತನಿಖೆ ನಡೆಸಲು ಮುಖ್ಯ ಕಾರ್ಯದರ್ಶಿ ನೇತೃತ್ವದ ತನಿಖಾ ಸಮಿತಿಯನ್ನು ರಾಜ್ಯಪಾಲ ರಾಮ್‌ನಾಕ್ ರಚಿಸಿದ್ದಾರೆ.
ಪ್ರಕರಣದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ರಾಜ್ಯಪಾಲರು. ಸಮಿತಿ ಸಲ್ಲಿಸುವ ವರದಿಯ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಘಟನೆಯ ಸಂದರ್ಭ ಪೊಲೀಸರು ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದನ್ನು ಸಮಿತಿ ಪರಿಶೀಲಿಸಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಆದಿತ್ಯನಾಥ್ ಘಟನೆಯ ತನಿಖೆಗೆ ಈಗಾಗಲೇ ಆದೇಶಿಸಿದ್ದಾರೆ.