ಆರ್ಥಿಕ ಸಲಹಾ ಸಮಿತಿ ರಚಿಸಿದ ಪ್ರಧಾನಿ ಮೋದಿ

Update: 2017-09-25 16:24 GMT

ಹೊಸದಿಲ್ಲಿ, ಸೆ.25: ಪ್ರಮುಖ ವಿಚಾರಗಳ ವಿಶ್ಲೇಷಣೆ ನಡೆಸಲು ಹಾಗೂ ಆ ಬಗ್ಗೆ ಸಲಹೆ ನೀಡುವ ಉದ್ದೇಶದಿಂದ ಪ್ರಧಾನಿ ಮೋದಿ ನೀತಿ ಆಯೋಗದ ಸದಸ್ಯ ಬಿಬೇಕ್ ದೇಬ್‌ರಾಯ್ ಅಧ್ಯಕ್ಷತೆಯಲ್ಲಿ ಆರ್ಥಿಕ ಸಲಹಾ ಸಮಿತಿಯನ್ನು ರಚಿಸಿದ್ದಾರೆ.

ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಸಮಿತಿ (ಇಎಸಿ- ಪಿಎಂ) ಎಂಬ ಹೆಸರಿನ ಈ ಸಮಿತಿಯಲ್ಲಿ ಸುರ್ಜೀತ್ ಭಲ್ಲ, ರಥಿನ್ ರಾಯ್ ಹಾಗೂ ಆಶಿಮಾ ಗೋಯೆಲ್ ಸದಸ್ಯರಾಗಿರುತ್ತಾರೆ. ನೀತಿ ಆಯೋಗದ ಸದಸ್ಯ ಕಾರ್ಯದರ್ಶಿ ರತನ್ ವತಾಲ್ ಸಮಿತಿಯ ಪ್ರಧಾನ ಸಲಹೆಗಾರರಾಗಿರುತ್ತಾರೆ.

ಪ್ರಧಾನಿ ಸೂಚಿಸಿದ ಆರ್ಥಿಕ ಅಥವಾ ಇನ್ಯಾವುದೇ ವಿಷಯವನ್ನು ವಿಶ್ಲೇಷಿಸಿ ಆ ಬಗ್ಗೆ ಪ್ರಧಾನಿಗೆ ಸಲಹೆ ನೀಡುವುದು ಹಾಗೂ ಮಹತ್ವದ ಆರ್ಥಿಕ ವಿಷಯಗಳ ಕುರಿತು ತನ್ನ ಅಭಿಪ್ರಾಯವನ್ನು ಪ್ರಧಾನಿಗೆ ತಿಳಿಸುವುದು ಈ ಸಮಿತಿಯ ಪ್ರಧಾನ ಕಾರ್ಯವಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News