ಕನಿಷ್ಟ ಬ್ಯಾಲೆನ್ಸ್ ಮಿತಿ ಕಡಿಮೆಗೊಳಿಸಿದ ಎಸ್‌ಬಿಐ

Update: 2017-09-25 16:30 GMT

ಮುಂಬೈ, ಸೆ.25: ಉಳಿತಾಯ ಖಾತೆಯಲ್ಲಿ ಪ್ರತೀ ತಿಂಗಳು ಇರಬೇಕಾದ ಸರಾಸರಿ ಕನಿಷ್ಟ ಬ್ಯಾಲೆನ್ಸ್ ಮಿತಿ(ಎಂಬಿಎ) ಯನ್ನು 5,000 ರೂ.ನಿಂದ 3,000 ರೂ.ಗೆ ಕಡಿಮೆಗೊಳಿಸಿರುವ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯ, ನಿಯಮ ಉಲ್ಲಂಘಿಸುವ ಗ್ರಾಹಕರಿಗೆ ವಿಧಿಸಲಾಗುವ ದಂಡದ ಮೊತ್ತವನ್ನೂ ಕಡಿಮೆಗೊಳಿಸಿದೆ.

ಅಲ್ಲದೆ ಪಿಂಚಣಿ ಪಡೆಯುವವರು, ಸರಕಾರದ ಕೆಲವು ಸಾಮಾಜಿಕ ಕೊಡುಗೆಗಳ ಫಲಾನುಭವಿಗಳು ಹಾಗೂ ಅಪ್ರಾಪ್ತರಿಗೆ ಎಂಬಿಎ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಅಕ್ಟೋಬರ್‌ನಿಂದ ಹೊಸ ನಿಯಮ ಅನ್ವಯವಾಗುತ್ತದೆ ಎಂದು ಎಸ್‌ಬಿಐ ತಿಳಿಸಿದೆ.

 ಕಳೆದ ಎಪ್ರಿಲ್‌ನಲ್ಲಿ ಎಂಬಿಎ ನಿಯಮವನ್ನು ಪರಿಷ್ಕರಿಸಿದ್ದ ಎಸ್‌ಬಿಐ, ಮಹಾನಗರ ವಾಸಿಗಳಿಗೆ 5,000 ರೂ, ನಗರ ಪ್ರದೇಶದ ನಿವಾಸಿಗಳಿಗೆ 3,000 ರೂ. ಅರೆನಗರ ಪ್ರದೇಶದ ನಿವಾಸಿಗಳಿಗೆ 2,000 ರೂ. ಹಾಗೂ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ 1,000 ರೂ. ಎಂದು ನಿಗದಿಗೊಳಿಸಿತ್ತು.

   ಇದೀಗ ಮಹಾನಗರ ಪ್ರದೇಶ ಹಾಗೂ ನಗರಪ್ರದೇಶವನ್ನು ಏಕರೀತಿಯಲ್ಲಿ ಪರಿಗಣಿಸಲಾಗಿದ್ದು ಎಂಬಿಎಯನ್ನು 3,000 ರೂ. ಎಂದು ನಿಗದಿಗೊಳಿಸಲಾಗಿದೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News