ಶರೀಫ್ ವಿರುದ್ಧ ಅ.2ರಂದು ದೋಷಾರೋಪಣೆ

Update: 2017-09-26 16:52 GMT

ಇಸ್ಲಾಮಾಬಾದ್, ಸೆ. 26: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ವಿರುದ್ಧ ದಾಖಲಾಗಿರುವ ಮೂರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಕ್ಟೋಬರ್ 2ರಂದು ಅವರ ವಿರುದ್ಧ ಔಪಚಾರಿಕವಾಗಿ ದೋಷಾರೋಪಣೆ ಹೊರಿಸಲಾಗುವುದು ಎಂದು ರಾಷ್ಟ್ರೀಯ ಬಾಧ್ಯತಾ ಮಂಡಳಿ ನ್ಯಾಯಾಲಯ ಮಂಗಳವಾರ ಪ್ರಕಟಿಸಿದೆ.

ಅದೇ ವೇಳೆ, ಪದಚ್ಯುತ ಪ್ರಧಾನಿಯ ಮಕ್ಕಳಾದ ಹಸನ್, ಹುಸೈನ್ ಮತ್ತು ಮರ್ಯಮ್ ನವಾಝ್ ಮತ್ತು ಅವರ ಅಳಿಯ ಮುಹಮ್ಮದ್ ಸಫ್ದರ್ ವಿರುದ್ಧ ನ್ಯಾಯಾಲಯ ಬಂಧನ ಆದೇಶಗಳನ್ನೂ ಹೊರಡಿಸಿದೆ.

ಇದಕ್ಕೂ ಮೊದಲು, ತನ್ನ ವಿರುದ್ಧದ ಪ್ರಕರಣಗಳ ವಿಚಾರಣೆಗಾಗಿ ಶರೀಫ್ ಸ್ವಲ್ಪ ಹೊತ್ತು ನ್ಯಾಯಾಲಯದಲ್ಲಿ ಹಾಜರಾದರು. ಬಳಿಕ, ಕೆಲವೇ ನಿಮಿಷಗಳಲ್ಲಿ ಹೋಗಲು ನ್ಯಾಯಾಲಯ ಅವರಿಗೆ ಅನುಮತಿ ನೀಡಿತು.

ತನ್ನ ಪತ್ನಿ ಕುಲ್ಸೂಮ್‌ಗೆ ಸೌಖ್ಯವಿಲ್ಲ ಎಂಬ ನೆಲೆಯಲ್ಲಿ ಬೇಗನೆ ಹೋಗಲು ಅವರು ನ್ಯಾಯಾಲಯದಿಂದ ಅನುಮತಿ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News