“ನಮ್ಮ ವಿಮಾನದ ರೆಕ್ಕೆಗಳು ಉದುರಿ ಬಿದ್ದಿವೆ, ನಿಮ್ಮ ಸೀಟ್ ಬೆಲ್ಟ್‌ಗಳನ್ನು ಕಟ್ಟಿ ಗಟ್ಟಿಯಾಗಿ ಕುಳಿತಿರಿ”
Update: 2017-09-27 19:29 IST
ಹೊಸದಿಲ್ಲಿ,ಸೆ.27: ದೇಶದ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸಿರುವುದಕ್ಕಾಗಿ ಬಿಜೆಪಿ ನಾಯಕ ಯಶವಂತ ಸಿನ್ಹಾ ಅವರು ವಿತ್ತಸಚಿವ ಅರುಣ್ ಜೇಟ್ಲಿಯವರನ್ನು ತರಾಟೆಗೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆರ್ಥಿಕತೆ ಕುರಿತು ಮೋದಿ ಸರಕಾರವನ್ನು ಬುಧವಾರ ಕಟುವಾಗಿ ಟೀಕಿಸಿದೆ.
‘‘ಮಹಿಳೆಯರೇ ಮತ್ತು ಮಹನೀಯರೇ, ಇದು ನಿಮ್ಮ ವಿಮಾನದ ಸಹಪೈಲಟ್ ಮತ್ತು ವಿತ್ತಸಚಿವ ಮಾತನಾಡುತ್ತಿರುವುದು. ದಯವಿಟ್ಟು ನಿಮ್ಮ ಸೀಟ್ ಬೆಲ್ಟ್‌ಗಳನ್ನು ಕಟ್ಟಿಕೊಂಡು ಗಟ್ಟಿಯಾಗಿ ಕುಳಿತಿರಿ. ನಮ್ಮ ವಿಮಾನದ ರೆಕ್ಕೆಗಳು ಉದುರಿ ಬಿದ್ದಿವೆ ’’ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಟ್ವೀಟಿಸಿದ್ದಾರೆ.
ಸಿನ್ಹಾ ಸತ್ಯವನನು ಬಿಚ್ಚಿಟ್ಟಿದ್ದಾರೆ. ಸರಕಾರವು ಈಗಲಾದರೂ ಸತ್ಯವನ್ನು ಒಪ್ಪಿಕೊಳ್ಳುತ್ತದೆಯೇ ಎಂದು ಹಿರಿಯ ಕಾಂಗ್ರೆಸ್ ನಾಯಕ ಚಿದಂಬರಂ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.