ಕೊನೆಗೂ ಮಾರಾಟವಾಯ್ತು ವಿಶ್ವದ 2ನೆ ಅತೀ ದೊಡ್ಡ ವಜ್ರ

Update: 2017-09-27 14:21 GMT

ಹೊಸದಿಲ್ಲಿ, ಸೆ.27: ಕೆನಡಾದ ‘ಲುಕಾರಾ ಡೈಮಂಡ್ ಕಾರ್ಪ್’ ಬಳಿಯಿದ್ದ  1,109 ಕ್ಯಾರಟ್ ನ ವಿಶ್ವದ 2ನೆ ಅತೀ ದೊಡ್ಡ ವಜ್ರವನ್ನು ‘ಲಕ್ಸುರಿ ಜ್ಯುವೆಲ್ಲರ್ ಗ್ರಾಫ್ ಡೈಮಂಡ್’ ಖರೀದಿಸಿದೆ.

ಬೋಟ್ಸ್ವಾನದಲ್ಲಿರುವ ಲುಕಾರಾದ ಕರೋವೆ ಗಣಿಯಿಂದ ಈ ವಜ್ರವನ್ನು 2015ರ ನವೆಂಬರ್ ನಲ್ಲಿ ಹೊರತೆಗೆಯಲಾಗಿತ್ತು. ಸುಮಾರು 3 ಬಿಲಿಯನ್ ವರ್ಷ ಹಳೆಯದು ಎನ್ನಲಾದ ಈ ವಜ್ರ ಬರೋಬ್ಬರಿ 53 ಮಿಲಿಯನ್ ಡಾಲರ್ ಅಂದರೆ 346 ಕೋಟಿ ರೂ.ಗಳಿಗೆ ಮಾರಾಟವಾಗಿದೆ.

ಇದೇ ಸಮಯದಲ್ಲಿ ‘ಲುಕಾರಾ’ ಹೊರತೆಗೆದಿದ್ದ 813 ಕ್ಯಾರಟ್ ನ ವಜ್ರಕ್ಕಿಂತ ಈ ವಜ್ರ ದೊಡ್ಡದು ಎಂದು ಲುಕಾರಾ ಹೇಳಿದೆ. ಆದರೆ ಈ ವಜ್ರ ಮಾರಾಟವಾದ ಮೊತ್ತ 813 ಕ್ಯಾರಟ್ ನ ವಜ್ರ ಮಾರಾಟವಾದ ಮೊತ್ತಕ್ಕಿಂತ ಕಡಿಮೆಯಿದೆ. ಇದನ್ನು ತುಂಡರಿಸುವುದೂ ಕಠಿಣವಾಗಿದ್ದು, ಬಣ್ಣವೂ ಅಷ್ಟೊಂದು ಒಳ್ಳೆಯದಿಲ್ಲ ಎಂದು ಪರಿಣಿತರು ಅಭಿಪ್ರಾಯಪಡುತ್ತಾರೆ.

ಕಳೆದ ವರ್ಷ ಲಂಡನ್ ನ ಸೋತ್ ಬೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗದೆ ಉಳಿದಿದ್ದ ವಿಶ್ವದ 2ನೆ ಅತೀ ದೊಡ್ಡ ವಜ್ರ 75 ಮಿಲಿಯನ್ ಡಾಲರ್ ಗಳಿಗೆ ಮಾರಾಟವಾಗಬಹುದು ಎಂದು ನಿರೀಕ್ಷಿಸಲಾಗಿತ್ತು ಎಂದು ‘ಬಿಎಂಒ ಕ್ಯಾಪಿಟಲ್ ಮಾರ್ಕೆಟ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News