×
Ad

ಹಾಫಿಝ್ ಸಯೀದ್ ಗೃಹ ಬಂಧನ ವಿಸ್ತರಣೆ

Update: 2017-09-27 21:44 IST

ಲಾಹೋರ್, ಸೆ. 26: ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಾಫಿಝ್ ಸಯೀದ್ ಚಟುವಟಿಕೆ ದೇಶದ ಶಾಂತಿ ಹಾಗೂ ನೆಮ್ಮದಿಗೆ ಬೆದರಿಕೆ ಎಂದು ಹೇಳಿರುವ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಅಧಿಕಾರಿಗಳು ಆತನ ಗೃಹ ಬಂಧನವನ್ನು ಒಂದು ತಿಂಗಳು ವಿಸ್ತರಿಸಿದ್ದಾರೆ.

ಜಮಾತ್ ಉದ್ ದಾವಾ (ಜೆಯುಡಿ) ಮುಖ್ಯಸ್ಥನಾಗಿರುವ ಸಯೀದ್ ಕಳೆದ ವರ್ಷ ಜನವರಿ 31ರಿಂದ ಗೃಹಬಂಧನದಲ್ಲಿದ್ದಾನೆ.

 ಸಯೀದ್ ಹಾಗೂ ಆತನ ನಾಲ್ವರು ಸಹವರ್ತಿಗಳಾದ ಅಬ್ದುಲ್ಲಾ ಉಬೈದ್, ಮಲಿಕ್ ಝಫರ್ ಇಕ್ಬಾಲ್, ಅಬ್ದುಲ್ ರೆಹ್ಮಾನ್ ಅಬಿದ್ ಹಾಗೂ ಕಾಝಿ ಕಾಶಿಫ್ ಹುಸೈನ್‌ಗೆ ಸೆಪ್ಟಂಬರ್ 25ರಿಂದ ಅನ್ವಯವಾಗುವಂತೆ ಗೃಹ ಬಂಧನ ವಿಸ್ತರಿಸಿ ಪಂಜಾಬ್‌ನ ಗೃಹ ಇಲಾಖೆ ಆದೇಶಿಸಿದೆ. ಈ ಹಿಂದೆ ವಿಸ್ತರಿಸಲಾಗಿದ್ದ ಗೃಹಬಂಧನವನ್ನು ಜುಲೈ 28ರಂದು ಆದೇಶಿಸಲಾಗಿತ್ತು.

 ಜನವರಿ 31ರಂದು ಭಯೋತ್ಪಾದನೆ ತಡೆ ಕಾಯ್ದೆ ಅಡಿಯಲ್ಲಿ ಪಂಜಾಬ್ ಸರಕಾರ ಸಯೀದ್ ಹಾಗೂ ಇತರ ನಾಲ್ವರನ್ನು 90 ದಿನಗಳ ಗೃಹ ಬಂಧನಕ್ಕೆ ಒಳಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News