ಮೆಕ್ಸಿಕೊ: ಭೂಕಂಪದಿಂದ 13,091 ಕೋಟಿ ರೂ. ಹಾನಿ
Update: 2017-09-28 19:54 IST
ಮೆಕ್ಸಿಕೊ ಸಿಟಿ, ಸೆ. 28: ಈ ತಿಂಗಳು ಮೆಕ್ಸಿಕೊದಲ್ಲಿ ಸಂಭವಿಸಿದ ಎರಡು ಭೀಕರ ಭೂಕಂಪಗಳಿಂದಾಗಿ ಸಂಭವಿಸಿದ ಒಟ್ಟು ಹಾನಿಯ ಪ್ರಮಾಣ 2 ಬಿಲಿಯ ಡಾಲರ್ (ಸುಮಾರು 13,091 ಕೋಟಿ ರೂಪಾಯಿ)ಗಿಂತಲೂ ಹೆಚ್ಚಾಗಿದೆ ಎಂಬುದಾಗಿ ಅಂದಾಜಿಸಲಾಗಿದೆ ಎಂದು ಅಧ್ಯಕ್ಷ ಎನ್ರಿಕ್ ಪೆನ ನೀಟೊ ಬುಧವಾರ ತಿಳಿಸಿದರು.
ವಿಶೇಷವಾಗಿ ಭಾರೀ ಹಾನಿಗೆ ಒಳಗಾದ ಮೆಕ್ಸಿಕೊ ಸಿಟಿಯಲ್ಲಿ ಹಾನಿ ಅಂದಾಜು ಮುಂದುವರಿಯುತ್ತಿದೆ ಎಂದು ಅವರು ಹೇಳಿದರು.
ಭೂಕಂಪ ಸಂತ್ರಸ್ತರು ತಮ್ಮ ಮನೆಗಳನ್ನು ದುರಸ್ತಿ ಮಾಡಿಕೊಳ್ಳಲು ಸಾಧ್ಯವಾಗುವಂತೆ ಸರಕಾರವು ಅವರ ಖಾತೆಗಳಿಗೆ 356 ಮಿಲಿಯ ಡಾಲರ್ (ಸುಮಾರು 2,330 ಕೋಟಿ ರೂಪಾಯಿ) ಮೊತ್ತವನ್ನು ನೇರ ಇಲೆಕ್ಟ್ರಾನಿಕ್ ಪಾವತಿ ಮೂಲಕ ಹಸ್ತಾಂತರಿಸುತ್ತಿದೆ ಎಂದರು.
ಮಧ್ಯ ಮೆಕ್ಸಿಕೊದಲ್ಲಿ ಸೆಪ್ಟಂಬರ್ 19ರಂದು ಸಂಭವಿಸಿದ 7.1ರ ತೀವ್ರತೆಯ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 338ಕ್ಕೆ ಏರಿದೆ.