ಮತದಾರರ ಪಟ್ಟಿಯಲ್ಲಿ ಮಹಿಳೆಯಾದ ಟ್ರಂಪ್ ಅಳಿಯ
Update: 2017-09-28 21:00 IST
ವಾಶಿಂಗ್ಟನ್, ಸೆ. 28: ರಾಜಕೀಯಕ್ಕೆ ಹೊರತಾದ ವಿಚಿತ್ರ ಸುದ್ದಿಯೊಂದು ಅಮೆರಿಕದಿಂದ ಬಂದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಅಳಿಯ ಹಾಗೂ ಸಲಹಾಕಾರ ಜ್ಯಾರೆಡ್ ಕಶ್ನರ್‌ರನ್ನು ಮತದಾರರ ಪಟ್ಟಿಯಲ್ಲಿ ಮಹಿಳೆ ಎಂದು ನಮೂದಿಸಲಾಗಿದೆ. ನ್ಯೂಯಾರ್ಕ್‌ನ ಮತದಾರರ ಪಟ್ಟಿಯಲ್ಲಿ ಕಳೆದ ಎಂಟು ವರ್ಷಗಳಿಂದಲೂ ಇದು ಚಾಲ್ತಿಯಲ್ಲಿದೆ.
‘ವಯರ್ಡ್’ ಪತ್ರಿಕೆಯು ಇದರ ಸ್ಕ್ರೀನ್‌ಶಾಟನ್ನು ಪ್ರಕಟಿಸಿದೆ.
ಅಧಿಕಾರಶಾಹಿಯ ತಪ್ಪಿಗೆ ಕಶ್ನರ್ ಬಲಿಯಾಗುತ್ತಿರುವುದು ಇದು ಮೊದಲ ಸಲವೇನೂ ಅಲ್ಲ. 2009ಕ್ಕೂ ಮೊದಲು, ಕಶ್ನರ್‌ರ ಹೆಸರು ನ್ಯೂಜರ್ಸಿ ಮತದಾರರ ಪಟ್ಟಿಯಲ್ಲಿತ್ತು. ಅಲ್ಲಿ ಅವರ ಲಿಂಗವನ್ನು ಸೂಚಿಸುವ ಸ್ಥಳದಲ್ಲಿ ‘ಗೊತ್ತಿಲ್ಲ’ ಎಂಬುದಾಗಿ ಬರೆಯಲಾಗಿತ್ತು.
ಟ್ರಂಪ್‌ರ ಪುತ್ರಿ ಇವಾಂಕಾರನ್ನು ಕಶ್ನರ್ ಮದುವೆ ಆಗಿದ್ದಾರೆ.