ಮುಂಗಾರು ನಿರ್ಗಮನ ಆರಂಭ
ಹೊಸದಿಲ್ಲಿ, ಸೆ.27: ದೇಶದಲ್ಲಿ ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನೈರುತ್ಯ ಮುಂಗಾರು ಅವಧಿಯಾಗಿದ್ದು, ಸೆ.27ರಿಂದ ನೈರುತ್ಯ ಮುಂಗಾರು ಕೊನೆಯಾಗುವ ಲಕ್ಷಣ ಕಂಡುಬರುತ್ತಿದೆ ಎಂದು ಹಮಾವಾನ ಇಲಾಖೆ ತಿಳಿಸಿದೆ.
ವಾಡಿಕೆಯಂತೆ ಸೆ.15ರ ಬಳಿಕ ನೈರುತ್ಯ ಮುಂಗಾರು ದುರ್ಬಲವಾಗುತ್ತಾ ಹೋಗುತ್ತದೆ. ಆದರೆ ಈ ವರ್ಷ ದೇಶದ ಕೆಲವೆಡೆ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಅಲ್ಲದೆ ತೆಲಂಗಾಣ, ರಾಯಲಸೀಮ, ಕರ್ನಾಟಕದ ಕರಾವಳಿ ಪ್ರದೇಶ, ದಕ್ಷಿಣ ಒಳನಾಡು ಪ್ರದೇಶ ಮತ್ತು ಕೇರಳದಲ್ಲಿ ಮುಂಗಾರು ಇನ್ನೂ ಸಕ್ರಿಯವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಪಂಜಾಬ್, ಹರ್ಯಾಣದ ಕೆಲ ಪ್ರದೇಶಗಳು, ಪಶ್ಚಿಮ ರಾಜಸ್ತಾನದ ಬಹುತೇಕ ಪ್ರದೇಶ, ಕಚ್ ಮತ್ತು ಉತ್ತರ ಅರೇಬಿಯನ್ ಪ್ರದೇಶದ ಕೆಲವು ಪ್ರದೇಶಗಳಲ್ಲಿ ನೈರುತ್ಯ ಮುಂಗಾರು ನಿರ್ಗಮಿಸಿದೆ. ಸೆ.27ಕ್ಕೆ ಅನ್ವಯವಾಗುವಂತೆ, ಈ ವರ್ಷದಲ್ಲಿ ಮಳೆಪ್ರಮಾಣ ಉತ್ತಮವಾಗಿದ್ದು ಒಟ್ಟಾರೆ ಮಳೆಕೊರತೆ ಪ್ರಮಾಣ ಶೇ.5ರಷ್ಟಾಗಿದೆ ಎಂದು ಇಲಾಖೆ ತಿಳಿಸಿದೆ.