ಸಂಗೀತ ಕಾರಂಜಿ ಪ್ರದೇಶದಲ್ಲಿ ಮೇಲ್ಛಾವಣಿ ನಿರ್ಮಿಸಿ..!
Update: 2017-09-29 00:36 IST
ಮಾನ್ಯರೆ,
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ರಾತ್ರಿ 7ರಿಂದ 8ರ ತನಕ ಪ್ರತೀ ದಿನ ಸಂಗೀತ ಕಾರಂಜಿಯ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಇದು ತುಂಬಾ ಆಕರ್ಷಣೀಯವಾಗಿದೆ. ಪ್ರತೀ ದಿನ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಸಂಗೀತ ಕಾರಂಜಿ ಮತ್ತು ಅದರ ಸಂಗೀತದ ಅನುಭವವನ್ನು ಆನಂದಿಸಲು ಇಲ್ಲಿ ಸೇರುತ್ತಾರೆ.
ಆದರೆ ಪ್ರವಾಸಿಗರು ಹೆಚ್ಚಾಗಿ ಬರುವುದು ಮಳೆಗಾಲದಲ್ಲಿ. ಹೀಗಾಗಿ ಮಳೆ ಬಂದಾಗ ಇಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಲು ಕುತೂಹಲದಿಂದ ಆಸೀನರಾಗುವ ಪ್ರವಾಸಿಗರಿಗೆ ಮಳೆರಾಯನ ಕಾಟ ಹೆಚ್ಚಾಗಿ, ಎಲ್ಲರೂ ಚದುರುತ್ತಾರೆ. ಈ ಹಿನ್ನೆಲೆಯಲ್ಲಿ ಇಲ್ಲಿ ಮೇಲ್ಛಾವಣಿಯನ್ನು ಹಾಕಿದರೆ ಸಂಗೀತ ಕಾರಂಜಿಯ ಕಾರ್ಯಕ್ರಮವನ್ನು ಪ್ರವಾಸಿಗರು ಆನಂದದಿಂದ ಸವಿಯುತ್ತಾರೆ. ಪ್ರವಾಸೋದ್ಯಮ ಇಲಾಖೆಯವರು ಇತ್ತ ಸ್ವಲ್ಪ ಗಮನಿಸಿಯಾರೇ?.