ಇಂಗ್ಲಿಷ್ ಕಡಲ್ಗಾಲುವೆ ಈಜಿದ ಆರತಿ ಸಹಾ

Update: 2017-09-29 08:27 GMT

► 1959: ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜುವುದೆಂದರೆ ವೌಂಟ್ ಎವರೆಸ್ಟ್ ಶಿಖರ ಏರಿದಂತೆ ಎಂಬ ಮಾತಿದೆ. ಕಾಲುವೆಯ ಉದ್ದ, ಮೈಕೊರೆ ಯುವ ತಣ್ಣನೆಯ ನೀರು, ಅಪಾಯಕಾರಿ ಪ್ರಯಾಣ ಆ ರೀತಿಯ ಭಯಕ್ಕೆ ಕಾರಣ. ಈ ಎಲ್ಲ ಭಯವನ್ನೂ ಮೀರಿ 19 ವರ್ಷ ವಯಸ್ಸಿನ ಕೋಲ್ಕತಾದ ಆರತಿ ಸಹಾ ಈ ಕಾಲುವೆಯನ್ನು ಈ ದಿನ ಯಶಸ್ವಿಯಾಗಿ ಈಜಿದರು. ಇಂಗ್ಲಿಷ್ ಕಾಲುವೆಯನ್ನು ಯಶಸ್ವಿಯಾಗಿ ಈಜಿದ ಏಷ್ಯಾದ ಪ್ರಥಮ ಮಹಿಳೆ ಎಂಬ ಖ್ಯಾತಿಯನ್ನು ಅವರು ಪಡೆದರು. ದಾಖಲೆಯ ಈಜುವೀರ ಭಾರತದ ಮಿಹಿರ್‌ಸೇನ್ ಆರತಿ ಸಹಾಗೆ ಸ್ಫೂರ್ತಿಯಾಗಿದ್ದರು.

► 1853: ಸ್ಕಾಟ್‌ಲ್ಯಾಂಡ್‌ನಲ್ಲಿ ಅನ್ನೀ ಜೇನ್ ಎಂಬ ಪ್ರಯಾಣಿಕ ಹಡಗು ಮುಳುಗಿದ ಪರಿಣಾಮ 348 ಜನ ನೀರುಪಾಲಾದರು.

► 1885: ವಿಶ್ವದ ಪ್ರಥಮ ಪ್ರಾಯೋಗಿಕ ಸಾರ್ವಜನಿಕ ವಿದ್ಯುತ್ ರೈಲು ಮಾರ್ಗ ಇಂಗ್ಲೆಂಡ್‌ನ ಬ್ಲಾಕ್‌ಪೂಲ್ ಎಂಬಲ್ಲಿ ಆರಂಭವಾಯಿತು.

► 1911: ಇಟಲಿ ದೇಶವು ಟರ್ಕಿಯ ಮೇಲೆ ಯುದ್ಧ ಸಾರುವ ಮೂಲಕ ಇಟಾಲೋ-ಟರ್ಕಿಶ್ ಯುದ್ಧ ಆರಂಭವಾಯಿತು.

► 1915: ಮಿಸಿಸಿಪ್ಪಿ ನದಿಯ ಮುಖಜಭೂಮಿಯಲ್ಲಿ ಸಂಭವಿಸಿದ ಚಂಡಮಾರುತಕ್ಕೆ 275 ಜನ ಬಲಿಯಾದರು.

► 1927: ಸೈಂಟ್ ಲೂಯಿಸ್ ಮಿಸ್ಸೌರಿಯಲ್ಲಿ ಪ್ರಬಲ ಬಿರುಗಾಳಿಗೆ 85 ಜನ ಅಸುನೀಗಿದರು.

► 1957: ಪಾಕಿಸ್ತಾನದಲ್ಲಿ ಎಕ್ಸ್‌ಪ್ರೆಸ್ ರೈಲೊಂದು ನಿಂತ ರೈಲಿಗೆ ಢಿಕ್ಕಿ ಹೊಡೆದ ಪರಿಣಾಮ 300 ಜನ ಮೃತರಾದರು.

► 1928: ರಾಜತಂತ್ರಜ್ಞ, ರಾಜಕಾರಣಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಬ್ರಿಜೇಶ್ ಚಂದ್ರ ಮಿಶ್ರಾ ಜನ್ಮದಿನ ಇಂದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News