ಜಿಯೋ ಫೀಚರ್ ಫೋನ್‌ನ್ನು ಟಿವಿಗೆ ಸಂಪರ್ಕಿಸುವ ಕೇಬಲ್ ಹೇಗೆ ಕೆಲಸ ಮಾಡುತ್ತದೆ ಗೊತ್ತೇ...?

Update: 2017-09-29 09:13 GMT

ಮುಕೇಶ ಅಂಬಾನಿಯಯವರ ರಿಲಾಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಕೇವಲ 1,500 ರೂ.ಗಳ ವಾಪಸ್ ಆಗುವ ಠೇವಣಿ ಪಾವತಿಯೊಂದಿಗೆ ಫೀಚರ್ ಪೋನ್‌ನ್ನು ನೀಡಲು ಸಜ್ಜಾಗಿದೆ. 4ಜಿ ಸಂಪರ್ಕದೊಂದಿಗೆ ಈ ಫೋನ್ ವೀಡಿಯೊಗಳನ್ನು ಟಿವಿ ಪರದೆಯಲ್ಲಿ ವೀಕ್ಷಿಸುವ ಸೌಲಭ್ಯವನ್ನೂ ಕಲ್ಪಿಸುವ ಜೊತೆಗೆ ಭಾರೀ ಸದ್ದು ಮಾಡಿದೆ. ಇತ್ತೀಚಿಗೆ ಗೆಜೆಟ್ ಡೆಸ್ಕ್ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ರಿಲಾಯನ್ಸ್ ಜಿಯೋ ಫೀಚರ್ ಫೋನ್‌ನೊಂದಿಗೆ ಟಿವಿಯನ್ನು ಸಂಪರ್ಕಿಸುವ ಕೇಬಲ್ ಅನ್ನು ಬಿಡುಗಡೆ ಮಾಡಲಾಗಿದೆ. ಇದೊಂದು ಅಡಾಪ್ಟರ್ ಆಗಿದ್ದು, ಕೇಬಲ್ ನೆರವಿನೊಂದಿಗೆ ಟಿವಿ ಮತ್ತು ಫೋನ್ ನಡುವೆ ಒಂದು ಪ್ಲಾಟ್‌ಫಾರ್ಮ್‌ನ್ನು ಸೃಷ್ಟಿಸುತ್ತದೆ. ಇದಕ್ಕೆ ಚಾಲನೆ ದೊರೆತಾಗ ಫೋನ್‌ನಲ್ಲಿಯ ವೀಡಿಯೊ ಟಿವಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ,ಹೀಗಾಗಿ ಈ ಫೋನ್ ಕೂಡ ಸ್ಮಾರ್ಟ್‌ಫೋನ್‌ಗಳ ಸಾಲಿನಲ್ಲಿ ನಿಲ್ಲುತ್ತದೆ.

ಈ ಕೇಬಲ್ ನೆರವಿನಿಂದ ಜಿಯೋ ಫೋನ್‌ನ್ನು ಎಲ್‌ಇಡಿ, ಎಲ್‌ಸಿಡಿ ಮತ್ತು ಸಿಆರ್‌ಟಿ ಟಿವಿಗಳ ಜೊತೆಗೆ ಸಂಪರ್ಕಿಸಬಹುದಾಗಿದೆ. ಇದಕ್ಕಾಗಿ ಟಿವಿಯು ಎಚ್‌ಡಿ ರೆಸೊಲ್ಯೂಷನ್ ಹೊಂದಿರಬೇಕಾಗುತ್ತದೆ. ಈ ಅಡಾಪ್ಟರ್‌ನಲ್ಲಿ ಎಚ್‌ಡಿಎಂಐ ಮತ್ತು ಡಿವಿ ಔಟ್‌ಪುಟ್ ಪೋರ್ಟ್ ಇರುತ್ತದೆ. ಡಿವಿ ಔಟ್‌ಪುಟ್ ಪೋರ್ಟ್ ಫೋನ್‌ನ ಸ್ಪೀಕರ್ ಚಲಾಯಿಸಲು ಬಳಕೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News