×
Ad

ರೊಹಿಂಗ್ಯಾ ಹಿಂದೂಗಳ ಸಾಮೂಹಿಕ ಸಮಾಧಿ ಪತ್ತೆ: ತಪ್ಪಿತಸ್ಥರನ್ನು ಶಿಕ್ಷಿಸಲು ಭಾರತ ಆಗ್ರಹ

Update: 2017-09-30 18:01 IST

ಹೊಸದಿಲ್ಲಿ,ಸೆ. 30: ಮ್ಯಾನ್ಮಾರ್‍ನಲ್ಲಿ ಹಿಂದೂಗಳನ್ನು ಸಾಮೂಹಿಕವಾಗಿ ಕೊಂದು  ಗುಂಡಿತೋಡಿ ಮುಚ್ಚಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ  ಕಠಿಣ ಕ್ರಮಕೈಗೊಳ್ಳ ಬೇಕೆಂದು ಭಾರತ ಆಗ್ರಹಿಸಿದೆ. ಕೊಂದು ಮುಚ್ಚಿಹಾಕಿದ್ದ ಎಲ್ಲ ಶವಗಳು ಕೂಡಾ ಹಿಂದೂಗಳದ್ದೆಂದು ಮ್ಯಾನ್ಮಾರ್ ಸ್ಟೇಟ್ ಕೌನ್ಸಿಲರ್ ತಿಳಿಸಿರುವ ಹಿನ್ನೆಲೆಯಲ್ಲಿ ವಿದೇಶ ವಕ್ತಾರ ರವೀಶ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ.

ಘಟನೆಯ ಕುರಿತ ಪತ್ರಿಕಾವರದಿಮತ್ತು ಮ್ಯಾನ್ಮಾರ್ ಸರಕಾರದ ಅಧಿಕೃತ ಹೇಳಿಕೆಯ ಆಧಾರದಲ್ಲಿ ಭಾರತ ಪ್ರತಿಕ್ರಿಯಿಸಿದೆ. ಭಾರತ ಎಲ್ಲ ಕಾಲದಲ್ಲಿಯೂ ಭಯೋತ್ಪಾದನೆಯನ್ನು  ಖಂಡಿಸಿದೆ. ಗಲಭೆಯಲ್ಲಿ ಸಾಮಾನ್ಯಜನರನ್ನು ಗುರಿಮಾಡುವ  ಪ್ರವೃತ್ತಿಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಈ ಅಪರಾಧ ಕೃತ್ಯವೆಸಗಿದವರನ್ನು ಶಿಕ್ಷಿಸಬೇಕೆಂದು ಭಾರತ ಆಗ್ರಹಿಸಿದೆ.

ಸಾವಿಗೀಡಾದ ವ್ಯಕ್ತಿಗಳ ಕುಟುಂಬಗಳಿಗೆ ಸೂಕ್ತ ನಷ್ಟಪರಿಹಾರ ನೀಡಲು ಸರಕಾರ ಮುಂದೆ ಬರಬೇಕು. ರೋಹಿಂಗ್ಯನ್ ಸಮಸ್ಯೆಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ಪರಸ್ಪರ ಚರ್ಚೆ ನಡೆಸುತ್ತಿದೆ ಎಂದು ರವೀಶ್‍ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News