ಜೆಟ್ ಇಂಧನ ದರ, ಎಲ್‌ಪಿಜಿ ಸಿಲಿಂಡರ್ ದರ ಏರಿಕೆ

Update: 2017-10-01 15:19 GMT

ಹೊಸದಿಲ್ಲಿ, ಅ. 2: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರ ಸ್ಥಿರಗೊಳ್ಳುತ್ತಿದ್ದಂತೆ ಜೆಟ್ ಇಂಧನ ಅಥವಾ ಎಟಿಎಫ್ ದರ ರವಿವಾರ ಶೇ. 6ರಷ್ಟು ಏರಿಕೆಯಾಗಿದೆ. ಆಗಸ್ಟ್ ಅನಂತರ ಎಟಿಎಫ್ ದರ ಏರಿಕೆಯಾಗುತ್ತಿರುವುದು ಇದು ಮೂರನೆ ಬಾರಿ. ವಿಮಾನದ ಟರ್ಬೈನ್ ಇಂಧನ (ಎಟಿಎಫ್) ಇನ್ನು ದಿಲ್ಲಿಯಲ್ಲಿ 1 ಲೀಟರ್‌ಗೆ 53.045 ರೂ. ಆಗಲಿದೆ. ಈ ಮೊದಲು 50.020 ರೂ. ಇತ್ತು. ದರ ಏರಿಕೆಯಿಂದ 3.025 ರೂ. ಹೆಚ್ಚಳವಾಗಿದೆ ಎಂದು ಇಂಡಿಯನ್ ಆಯಿಲ್‌ನ ಅಧಿಸೂಚನೆ ತಿಳಿಸಿದೆ. ಎಟಿಎಫ್ ದರ ಏರಿಕೆಯಾಗುತ್ತಿರುವುದು ಇದು ಸತತ ಮೂರನೇ ತಿಂಗಳು. ಕೊನೆಯದಾಗಿ ಸೆಪ್ಟಂಬರ್ 1ರಂದು ಶೇ. 4 (1 ಲೀಟರ್‌ಗೆ 1,910 ರೂ.) ಇತ್ತು.

ಮಾರ್ಚ್ ಒಳಗಡೆ ಸಬ್ಸಿಡಿ ರದ್ದುಗೊಳಿಸಲು ಪ್ರತಿ ತಿಂಗಳು ದರ ಹೆಚ್ಚಿಸುವ ಸರಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಅಡುಗೆ ಅನಿಲದ ದರ ಕೂಡ ಪ್ರತಿ ಸಿಲಿಂಡರ್‌ಗೆ 1.50 ರೂ. ಏರಿಕೆಯಾಗಿದೆ.

ರವಿವಾರದಿಂದ ಸಬ್ಸಿಡಿ ದರದ 14.2 ಕಿ.ಗ್ರಾಂ ಎಲ್‌ಪಿಜಿ ಸಿಲಿಂಡರ್‌ನ ದರ ದಿಲ್ಲಿಯಲ್ಲಿ ಈ ಹಿಂದಿನ 487.18 ರೂ.ಗೆ ಬದಲಾಗಿ 488.68 ರೂ. ಆಗಲಿದೆ ಎಂದು ಐಒಸಿ ತಿಳಿಸಿದೆ.

 ಸೆಪ್ಟಂಬರ್ 1ರಿಂದ ಅನ್ವಯವಾಗುವಂತೆ ಎಲ್‌ಪಿಜಿ ಪ್ರತಿ ಸಿಲಿಂಡರ್‌ನ ದರವನ್ನು ರೂ. 7 ಏರಿಕೆ ಮಾಡಿದ್ದ ಬೆನ್ನಲ್ಲೇ ಈ ಏರಿಕೆ ಆಗಿದೆ.

  ಮುಂದಿನ ವರ್ಷ ಮಾರ್ಚ್ ಒಳಗಡೆ ಎಲ್ಲ ಸಬ್ಸಿಡಿ ರದ್ದುಗೊಳಿಸಲು ಎಲ್‌ಪಿಜಿ ದರವನ್ನು ಪ್ರತಿ ತಿಂಗಳು ಪ್ರತಿ ಸಿಲಿಂಡರ್‌ಗೆ 4 ರೂ. ವರೆಗೆ ಏರಿಕೆ ಮಾಡುವ ಮೂಲಕ ಸಬ್ಸಿಡಿ ದರದ ಎಲ್‌ಪಿಜಿ ದರ ಹೆಚ್ಚಿಸಬೇಕು ಎಂದು ರಾಷ್ಟ್ರ ಸ್ವಾಮಿತ್ವದ ತೈಲ ಕಂಪೆನಿಗಳಲ್ಲಿ ಸರಕಾರ ವಿನಂತಿಸಿದೆ ಎಂದು ಜುಲೈ 31ರಂದು ತೈಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದರು.

ಕಳೆದ ವರ್ಷ ಜುಲೈಯಿಂದ ತಿಂಗಳ ಏರಿಕೆ ನೀತಿ ಅನುಷ್ಠಾನಗೊಳಿಸಿದ ಬಳಿಕ ಸಬ್ಸಿಡಿ ದರದ ಎಲ್‌ಪಿಜಿ ದರ ಪ್ರತಿ ಸಿಲಿಂಡರ್‌ಗೆ 69.50 ರೂ. ಏರಿಕೆಯಾಗಿತ್ತು. 2016 ಜೂನ್‌ನಲ್ಲಿ 14.2 ಕಿ.ಗ್ರಾಂ. ಎಲ್‌ಪಿಜಿ ಸಿಲಿಂಡರ್‌ನ ದರ 419.18 ಇತ್ತು.

ಸತತ ಮೂರನೇ ತಿಂಗಳು ಎಟಿಎಫ್ ದರ ಹೆಚ್ಚಳವಾಗುತ್ತಿದೆ. ಕೊನೆಯದಾಗಿ ಶೆ. 4 ಇತ್ತು.

 ಪ್ರತಿ ತಿಂಗಳು ದರ ಹೆಚ್ಚಳದ ಸರಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಎಲ್‌ಪಿಜಿ ದರ ಕೂಡ ಪ್ರತಿ ಸಿಲಿಂಡರ್‌ಗೆ ರೂ. 1.50 ಹೆಚ್ಚಳವಾಗಿದೆ.

ತಿಂಗಳ ಏರಿಕೆ ನೀತಿ ಅನುಷ್ಠಾನಗೊಳಿಸಿದ ಬಳಿಕ ಸಬ್ಸಿಡಿ ದರದ ಎಲ್‌ಪಿಜಿ ದರ ಪ್ರತಿ ಸಿಲಿಂಡರ್‌ಗೆ 69.50 ರೂ. ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News