×
Ad

ಕೊಚ್ಚಿ: ನೌಕಾ ಪಡೆ ಅಧಿಕಾರಿ ಗುಂಡೇಟಿನಿಂದ ಸಾವು

Update: 2017-10-01 21:16 IST

ಕೊಚ್ಚಿ, ಅ. 2: ಕೊಚ್ಚಿಯಲ್ಲಿ ಲಂಗರು ಹಾಕಿದ್ದ ಜಲ ಸಮೀಕ್ಷೆ ಹಡಗು ಐಎನ್‌ಎಸ್ ಜಮುನಾದಲ್ಲಿದ್ದ ನೌಕಾ ಪಡೆಯ ಅಧಿಕಾರಿಯೊಬ್ಬರು ರವಿವಾರ ನಿಗೂಢ ಗುಂಡಿನಿಂದಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಎನ್‌ಎಸ್ ಜಮುನಾದಲ್ಲಿ ಬೆಳಗ್ಗೆ 7.30ರ ಹೊತ್ತಿಗೆ ಗುಂಡಿನ ಸದ್ದು ಕೇಳಿಸಿತು. ಕೆಲವು ನಿಮಿಷಗಳ ಬಳಿಕ ಭಾರತೀಯ ನೌಕಾ ಪಡೆಯ ಭದ್ರತಾ ಅಧಿಕಾರಿ, ಗುಜರಾತ್ ಮೂಲದ ರಕ್ಷಾ ಕುಮಾರ್ ಪರ್ಮಾರ್ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ನೌಕಾ ಪಡೆ ಆಸ್ಪತ್ರೆ ಐಎನ್‌ಎಚ್‌ಎಸ್ ಸಂಜೀವನಿಗೆ ಕೊಂಡೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅವರು ಬೆಳಗ್ಗೆ 9.30ರ ಹೊತ್ತಿಗೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ಗಾಯ ಪರ್ಮಾರ್ ಅವರ ರಿವಾಲ್ವರ್‌ನಿಂದಲೇ ಆಗಿದೆ. ಇದು ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ನೌಕಾ ಪಡೆ ಹಾಗೂ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News