×
Ad

ಗುಜರಾತ್: 300 ದಲಿತರಿಂದ ಬೌದ್ಧ ಧರ್ಮ ಸ್ವೀಕಾರ

Update: 2017-10-01 21:28 IST

ಹೊಸದಿಲ್ಲಿ, ಅ,1: ಅಶೋಕ ವಿಜಯ ದಶಮಿಯ ಸಂದರ್ಭ ಅಹ್ಮದಾಬಾದ್ ಮತ್ತು ವಡೋದರದಲ್ಲಿ 300 ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದಾರೆ.

ಗುಜರಾತ್ ಬುದ್ಧಿಸ್ಟ್ ಅಕಾಡಮಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 50 ಮಹಿಳೆಯರು ಸೇರಿ 200 ಮಂದಿ ಬೌದ್ಧಧರ್ಮವನ್ನು ಸ್ವೀಕರಿಸಿದ್ದಾರೆ. ಖುಶಿನಗರದ ಬೌದ್ಧ ಧಾರ್ಮಿಕ ಮುಖ್ಯಸ್ಥ ದೀಕ್ಷೆಯನ್ನು ನೀಡಿದರು ಎಂದು ಸಂಸ್ಥೆಯ ಕಾರ್ಯದರ್ಶಿ ರಮೇಶ್ ಹೇಳಿದ್ದಾರೆ.

ವಡೋದರದಲ್ಲಿ ನಡೆದ ಕಾರ್ಯಕ್ರಮದಲ್ಲಿ 100  ಮಂದಿ ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದಾರೆ. ಪೋರಬಂದರ್ ನ ಪ್ರಜ್ಞಾ ರತ್ನ ದೀಕ್ಷೆಯನ್ನು ನೀಡಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕ ಮಧುಸೂದನ್ ರೋಹಿತ್ ಹೇಳಿದ್ದಾರೆ.

“ವಡೋದರದಲ್ಲಿ ನಾವು ಈ ಕಾರ್ಯಕ್ರಮವನ್ನು ಆಯೋಜಿಸಿದೆವು. ಈ ಕಾರ್ಯಕ್ರಮದ ಹಿಂದೆ ಯಾವುದೇ ಸಂಸ್ಥೆಗಳಿರಲಿಲ್ಲ. ಸ್ವಯಂಪ್ರೇರಣೆಯಿಂದ 100 ಮಂದಿ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದಾರೆ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News