×
Ad

ಫಿಫಾ-17 ವಿಶ್ವಕಪ್‌ನಲ್ಲಿ ಮಹಿಳಾ ಸಹಾಯಕ ರೆಫರಿ!

Update: 2017-10-01 23:46 IST

ಹೊಸದಿಲ್ಲಿ, ಅ.1: ಭಾರತದ ಆತಿಥ್ಯದಲ್ಲಿ ಅಕ್ಟೋಬರ್ 6ರಿಂದ ಫಿಫಾ ಅಂಡರ್-17 ವಿಶ್ವಕಪ್ ಆರಂಭವಾಗಲಿದ್ದು, ಫಿಫಾ ಪುರುಷರ ಫುಟ್ಬಾಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಮಹಿಳಾ ರೆಫರಿಗಳು ಕಾರ್ಯನಿರ್ವಹಿಸಲಿದ್ದಾರೆ.

  ‘‘ಫಿಫಾ ಇದೇ ಮೊದಲ ಬಾರಿ ಪುರುಷರ ವಿಶ್ವಕಪ್‌ನಲ್ಲಿ ಮಹಿಳಾ ರೆಫರಿಗಳಿಗೆ ಅವಕಾಶ ನೀಡಲು ಫಿಫಾ ನಿರ್ಧರಿಸಿದೆ. ಫಿಫಾ ಏಳು ಮಂದಿ ಸಹಾಯಕ ರೆಫರಿಗಳನ್ನು ಆಯ್ಕೆ ಮಾಡಿದೆ. ಮಹಿಳಾ ರೆಫರಿಗಳು ಕಳೆದ ವರ್ಷ ಪುರುಷ ಮ್ಯಾಚ್ ರೆಫರಿಗಳೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಇದೀಗ ನಾವು ಪುರುಷ ಹಾಗೂ ಮಹಿಳಾ ರೆಫರಿಗಳು ಒಟ್ಟಿಗೆ ಕಾರ್ಯನಿರ್ವಹಿಸುವುದನ್ನು ಬಯಸಿದ್ದೇವೆ’’ ಫಿಫಾ ರೆಫರಿ ಮುಖ್ಯಸ್ಥರಾದ ಮಸ್ಸಿಮೊ ಬುಸಾಕ ಹೇಳಿದ್ದಾರೆ.

ಭಾರತದಲ್ಲಿ ಅ.6 ರಿಂದ 28ರ ತನಕ ನಡೆಯಲಿರುವ ವಿಶ್ವಕಪ್‌ನ 52 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಲು 70 ಪುರುಷ ರೆಫರಿಗಳ ಜೊತೆಗೆ ಏಳು ಮಂದಿ ಮಹಿಳಾ ಸಹಾಯಕ ರೆಫರಿಗಳನ್ನು ಆಯ್ಕೆ ಮಾಡಲಾಗಿದೆ.

‘‘ಅಖಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) 16 ಅಧಿಕಾರಿಗಳಿಗೆ ಅಂಡರ್-17 ವಿಶ್ವಕಪ್‌ನ ವೇಳೆ ಫಿಫಾದಿಂದ ನೇಮಿಸಲ್ಪಟ್ಟ 77 ರೆಫರಿಗಳಿಂದ ಶನಿವಾರದಿಂದ ಅ.5ರ ತನಕ ಕೋಲ್ಕತಾದ ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ತರಬೇತಿ ಪಡೆಯುವ ಉತ್ತಮ ಅವಕಾಶ ಸಿಗಲಿದೆ’’ ಎಂದು ಎಐಎಫ್‌ಎಫ್ ರೆಫರಿಗಳ ನಿರ್ದೇಶಕರಾದ ಗೌತಮ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News