ಶಿಸ್ತಿನ ಪಾಲನೆಯಿಂದ ರಾಮರಾಜ್ಯ ನನಸು: ರೆ.ಫಾ. ರೋಬರ್ಟ್ ಡಿಸೋಜ

Update: 2017-10-02 06:58 GMT

ಮಂಗಳೂರು, ಅ. 2: ಜೀವನವು ದೇವರು ಕೊಟ್ಟ ಶ್ರೇಷ್ಠ ಕೊಡುಗೆಯಾಗಿದೆ. ಜೀವನವನ್ನು ಯಾವುದೇ ರೀತಿ0ುಲ್ಲಿ ವ್ಯರ್ಥಗೊಳಿಸಬಾರದು. ಮಹಾತ್ಮ ಗಾಂಧೀಜಿಯನ್ನು ಸ್ಮರಿಸುವ ಈ ಸಂದರ್ಭದಲ್ಲಿ ಅವರ ತತ್ವ–ಆದರ್ಶಗಳನ್ನು ಪಾಲಿಸುವುದರೊಂದಿಗೆ ಇತರರೊಡನೆ ಪ್ರೀತಿ, ಸಹನೆ, ಸಹಬಾಳ್ವೆ ನಡೆಸಿ ಜೀವನವನ್ನು ಸಂತೋಷಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ರೆ.ಫಾ. ರೋಬರ್ಟ್ ಡಿಸೋಜ ಅವರು ಹೇಳಿದರು.

ಅವರು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಆಚರಿಸಿದಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ವಧರ್ಮ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು  ಭಾಗವಹಿಸಿದ್ದರು. ಪ್ರಾಂಶುಪಾಲರು, ಉಪಪ್ರಾಂಶುಪಾಲೆ ಬೆಲಿಟಾ ಮಸ್ಕರೇನ್ಹಸ್, ವಿದ್ಯಾರ್ಥಿ ನಾಯಕ, ವಿದ್ಯಾರ್ಥಿ ನಾಯಕಿಯವರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದರು.

ವಿದ್ಯಾರ್ಥಿಗಳಾದ ಪೋರ್ಷಿಯ ಮತ್ತು ನಮಿತಾ ದಿನದ ಮಹತ್ವ ಹೇಳಿದರು. ಉಪ್ಪಿನ ಸತ್ಯಾಗ್ರಹ ಮತ್ತು ಸ್ವಚ್ಛ ಭಾರತದ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳು ಅಭಿನಯಿಸಿದರು. ಶಾಲೆಯ ಆಂಗ್ಲ ಭಾಷಾ ವಿಭಾಗದ ವತಿಯಿಂದ ನಡೆಸಿದ ಶಾಲಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈವಾ ಡಿಸೋಜ ಸ್ವಾಗತಿಸಿ, ಡ್ಯಾನಿಶ್ ಪಿಂಟೊ ವಂದಿಸಿದರು. ವಿದ್ಯಾರ್ಥಿಗಳಾದ ಶೈನಾ ರೆಬೆಲ್ಲೊ ಮತ್ತು ನಿಧಿ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸೀಮಾ ಮಾಡ್ತಾ, ಡೈನಾ ಕಾಯಕ್ರಮ ಸ00ೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News