ಖಿದ್ಮಾ ಫೌಂಡೇಶನ್ ಗುರುಕಂಬಳ: ಶೈಕ್ಷಣಿಕ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ

Update: 2017-10-02 09:38 GMT

ಮಂಗಳೂರು, ಅ. 2: ಎಸೆಸೆಲ್ಸಿ ಮತ್ತು ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಗೌರವಿಸುವ ಸಲುವಾಗಿ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಹಾಗೂ ಗುರುಕಂಬಳದ ಎ.ಕೆ.ಯು. ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಓಸ್ವಾಲ್ಡ್ ಫ್ರಾನ್ಸಿಸ್ ರೋಡ್ರಿಗಸ್ ಅವರಿಗೆ ಸನ್ಮಾನಿಸುವ ಕಾರ್ಯಕ್ರಮವು ಇಲ್ಲಿನ ದ.ಕ.ಜಿ.ಪಂ. ಉರ್ದು ಹಿ.ಪ್ರಾ.ಶಾಲೆಯಲ್ಲಿ ಜರುಗಿತು. 

ಈ ಸಂದರ್ಭದಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ 5 ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸದ್ರಿ ಶಾಲೆಯ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಎ.ಕೆ.ಯು. ಪ್ರೌಢಶಾಲೆ ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. 

ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಬಖಾರ್ ಅಬ್ದುಲ್ ಕರೀಂ, ಆಬಿದ್ ಅಸ್ಗರ್ ಮತ್ತು ಶೇಕ್ ಅಬ್ದುಲ್ ಶುಕೂರ್ ಅವರಿಗೆ ಜೀವಿತಾವಧಿ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಹಾಗೂ ದಿ. ನಿಸಾರ್ ಹುಸೈನ್ ಬಖಾರ್ ಅವರ ಜೀವಿತಾವಧಿ ಸಾಧನೆಗಾಗಿ ಅವರ ಪತ್ನಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಬಖಾರ್ ಅಬ್ದುಲ್ ಕರೀಂ ಸಾಹೇಬ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಿನ್ನಿಕಂಬಳ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ್ ರಾಮ್ ನಾಯ್ಕ್, ಕಿನ್ನಿಕಂಬಳ ಕ್ಲಸ್ಟರ್ ನ ಐರಿನ್ ಡಿಸೋಜ, ನಿವೃತ್ತ ಮುಖ್ಯ ಶಿಕ್ಷಕಿ ಯಶೋದ, ಮಸೀದಿ ಅಧ್ಯಕ್ಷ ಅನ್ವರ್ ಹುಸೇನ್ ಖಾನ್, ಕೆ.ಎಸ್.ಎ. ಅಧ್ಯಕ್ಷ ಸೈಯದ್ ಹುಸೈನ್, ರಾಜೇಶ್ವರಿ, ಆಬಿದ್ ಅಸ್ಗರ್, ಮುಹಮ್ಮದ್ ಹುಸೈನ್, ಬಾಜಿ ಮುಹಮ್ಮದ್ ಸಲೀಂ, ಬಶೀರ್ ಅಹ್ಮದ್ ಹಮ್ಮಾಜಿ, ಎನ್.ಎಸ್. ಮಾದಮಯ್ಯ, ಸೈಯದ್ ಸಿದ್ದೀಕ್, ಖಲೀಲ್ ಹಸನ್, ಸಾಬಿರ್ ಹುಸೈನ್, ಇಮ್ರಾನ್ ಖಾನ್, ಪಟೇಲ್ ಗೌಸ್ ಉಪಸ್ಥಿತರಿದ್ದರು. 

ದೈಹಿಕ ಶಿಕ್ಷಣ ಶಿಕ್ಷಕ ಪ್ರಮೋದ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸೈಯದ್ ಅನ್ವರ್ ಸ್ವಾಗತಿಸಿ, ಅಬ್ದುಲ್ ಹಮೀದ್ ಪಟೇಲ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News