ಅಮೆರಿಕದ ಮೂವರು ವಿಜ್ಞಾನಿಗಳಿಗೆ ವೈದ್ಯಕೀಯ ನೊಬೆಲ್

Update: 2017-10-02 13:53 GMT

ನ್ಯೂಯಾರ್ಕ್, ಅ.2: 2017ರ ಸಾಲಿನ ವೈದ್ಯಕೀಯ ನೊಬೆಲ್ ಪುರಸ್ಕಾರಕ್ಕೆ ಅಮೆರಿಕದ ವಿಜ್ಞಾನಿಗಳಾದ ಜೆಫ್ರಿ ಹಾಲ್,ಮೈಕೆಲ್ ರೊಸ್‌ಬ್ಯಾಶ್ ಹಾಗೂ ಮೈಕೆಲ್ ಯಂಗ್ ಆಯ್ಕೆಯಾಗಿದ್ದಾರೆ. ಮಾನವರ ದೇಹದಲ್ಲಿರುವ ಜೈವಿಕ ಗಡಿಯಾರವನ್ನು ನಿಯಂತ್ರಿಸುವಂತಹ ಆಣ್ವಿಕ ಕಾರ್ಯತಂತ್ರ (ಮಾಲಿಕ್ಯುಲರ್ ಮೆಕ್ಯಾನಿಸಂ)ಗಳ ಶೋಧನೆಗಾಗಿ ಅವರಿಗೆ ಈ ಪ್ರತಿಷ್ಠಿತ ಪುರಸ್ಕಾರ ದೊರೆತಿದೆ.

ವಿವಿಧ ಕಾಲ ವಲಯಗಳಲ್ಲಿ ದೀರ್ಘ ದೂರದವರೆಗೆ ಪ್ರಯಾಣಿಸುವ ವ್ಯಕ್ತಿಗಳು ಆಗಾಗ್ಗೆ ಪ್ರಯಾಸಕ್ಕೀಡಾಗುತ್ತಾರೆ ಮತ್ತು ಅವರು ಕೆಲವು ನಿರ್ದಿಷ್ಟ ರೋಗಗಳಿಗೆ ತುತ್ತಾಗುವ ಅಪಾಯ ಯಾಕೆ ಅಧಿಕವಾಗಿರುತ್ತದೆ ಎಂಬಿತ್ಯಾದಿ ವಿಷಯಗಳನ್ನು ಈ ವಿವರಿಸಲು ಈ ಆಣ್ವಿಕ ಕಾರ್ಯತಂತ್ರಗಳು ನೆರವಾಗುತ್ತವೆ.

  ಮಾನವನ ದೇಹದ ಜೈವಿಕ ಗಡಿಯಾರಗಳು ವ್ಯಕ್ತಿಗಳ ನಡವಳಿಕೆ, ಹಾರ್ಮೊನಮಟ್ಟಗಳು, ನಿದ್ರೆ, ದೇಹದ ತಾಪಮಾನ ಹಾಗೂ ಚಯಾಪದಂತಹ ಮಹತ್ವದ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುತ್ತವೆ.

 ಈ ಮೂವರು ವಿಜ್ಞಾನಿಗಳಿಗೆ 9 ದಶಲಕ್ಷ ಸ್ವೀಡಿಈಶ್ ಕ್ರೋನ್ ( 1.1 ದಶಲಕ್ಷ ಡಾಲರ್) ಬಹುಮಾನ ದೊರೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News