×
Ad

ಎಂಎಚ್370 ನಿಗೂಢ ನಾಪತ್ತೆ: ಅಂತಿಮ ವರದಿ ಬಿಡುಗಡೆ

Update: 2017-10-03 22:04 IST

ಕ್ಯಾನ್‌ಬೆರ (ಆಸ್ಟ್ರೇಲಿಯ), ಅ. 3: ಮಲೇಶ್ಯನ್ ಏರ್‌ಲೈನ್ಸ್‌ನ ಎಂಎಚ್370 ವಿಮಾನದ ನಿಗೂಢ ನಾಪತ್ತೆ ಕುರಿತು ತನಿಖೆ ನಡೆಸುತ್ತಿರುವ ಆಸ್ಟ್ರೇಲಿಯದ ಪತ್ತೆದಾರರು ಮಂಗಳವಾರ ತಮ್ಮ ಅಂತಿಮ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ನಾಪತ್ತೆಯಾಗಿರುವ ವಿಮಾನ ಪ್ರಯಾಣಿಕರ ಸಂಬಂಧಿಕರಿಗೆ ನಿಖರವಾಗಿ ಏನನ್ನೂ ಹೇಳಲು ಅಸಾಧ್ಯವಾಗುತ್ತಿರುವುದು ‘ಅತ್ಯಂತ ದೊಡ್ಡ ದುರಂತ’ವಾಗಿದೆ ಹಾಗೂ ಆಧುನಿಕ ಜಗತ್ತಿನಲ್ಲಿ ‘ಈ ಪರಿಸ್ಥಿತಿಯ ಊಹೆಯನ್ನೂ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಅಂತಿಮ ವರದಿ ಹೇಳಿದೆ.

2014 ಮಾರ್ಚ್ 8ರಂದು ರಾತ್ರಿ 239 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಕೌಲಾಲಂಪುರದಿಂದ ಬೀಜಿಂಗ್‌ಗೆ ಹಾರುತ್ತಿದ್ದ ಎಂಎಚ್370 ವಿಮಾನ ನಾಪತ್ತೆಯಾಗಿ ಮೂರೂವರೆ ವರ್ಷಗಳು ಸಂದಿವೆ.

ಇತಿಹಾಸದಲ್ಲೇ ಅತ್ಯಂತ ಬೃಹತ್ ಹಾಗೂ ಅತ್ಯಂತ ದುಬಾರಿ ಸಮುದ್ರದಾಳದ ಶೋಧ ಕಾರ್ಯದ ಉಸ್ತುವಾರಿ ವಹಿಸಿರುವ ಆಸ್ಟ್ರೇಲಿಯನ್ ಟ್ರಾನ್ಸ್‌ಪೋರ್ಟ್ ಸೇಫ್ಟಿ ಬ್ಯೂರೋ (ಎಟಿಎಸ್‌ಬಿ) ಅಂತಿಮ ವರದಿಯನ್ನು ಬಿಡುಗಡೆ ಮಾಡಿದೆ.

‘‘ಇದೊಂದು ಬೃಹತ್ ದುರಂತವಾಗಿಯೇ ಉಳಿದಿದೆ. ನಾಪತ್ತೆಯಾಗಿರುವ ಪ್ರಯಾಣಿಕರ ಶೋಕತಪ್ತ ಸಂಬಂಧಿಕರಿಗೆ ಸಮಾಧಾನಕರ ಅಂತಿಮ ಉತ್ತರವನ್ನು ನೀಡಲು ನಮಗೆ ಸಾಧ್ಯವಾಗಲಿಲ್ಲ’’ ಎಂದು ಬ್ಯುರೋದ ಮುಖ್ಯ ಕಮಿಶನರ್ ಗ್ರೆಗ್ ಹುಡ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News