ತೋಡಾರ್: ಬಿಎಂಕೆ ಹೆಲ್ತ್ ಸೆಂಟರ್‌ಗೆ ಶಿಲಾನ್ಯಾಸ

Update: 2017-10-04 14:04 GMT

ಮೂಡುಬಿದಿರೆ, ಅ.4: ತೋಡಾರು ಜಂಕ್ಷನ್‌ನಲ್ಲಿರುವ ಬಿಎಂಕೆ ಕಾಂಪೌಂಡ್‌ನಲ್ಲಿ ನೂತನ ಆಸ್ಪತ್ರೆ ‘ಬಿಎಂಕೆ ಸೆಂಟರ್’ಗೆ ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಲಾಯಿತು.

ಹಿರಿಯ ವಿದ್ವಾಂಸ ಕೆ.ಎಸ್.ಆಟಕ್ಕೋಯ ತಂಙಳ್ ಕುಂಬೋಳ್ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು 50 ಬೆಡ್‌ನ ಈ ಆಸ್ಪತ್ರೆಯು ಆಸುಪಾಸಿನ ರೋಗಿಗಳಿಗೆ ಮಿತದರದಲ್ಲಿ ಗುಣಮಟ್ಟದ ಸೇವೆ ನೀಡಲಿ ಎಂದು ಆಶಿಸಿದರು.

ಈ ಸಂದರ್ಭ ವ್ಯವಸ್ಥಾಪಕ ಬಿ.ಎಂ.ಕೆ. ಮೊಯ್ದಿನ್ ಹಾಜಿ, ಡಾ. ಮೆಹ್‌ಫೂಝ್, ಡಾ. ಮುಹ್‌ಸೀನ್, ಡಾ. ಮಶೂಕ್, ಡಾ. ಮೆಹತಾಬ್ ಬಾವಾ, ಅಬೂಬಕರ್ ಸಿದ್ದೀಕ್ ಮರ್ಝೂಕ್ ಹಾಗೂ ಕೆ.ಎಂ. ಉಸ್ಮಾನುಲ್ ಫೈಝಿ, ಹಾಜಿ ಶೇಖ್ ಅಹ್ಮದ್ ಕನ್ನಂಗಾರ್, ಗ್ರೂಫ್ 4 ಆಡಳಿತ ಪಾಲುದಾರ ಮುಹಮ್ಮದ್ ಬಾವಾ ಮತ್ತು ಸಹೋದರರು, ಇಬ್ರಾಹೀಂ ಶರೀಫ್ ತೀರ್ಥಹಳ್ಳಿ ಮತ್ತು ಸಹೋದರರು, ಎಂ. ಎಸ್. ಮುಹಮ್ಮದ್ ತೋಡಾರು ಮತ್ತು ಸಹೋದರರು, ಬಿಎಚ್‌ಬಿ ಅಬ್ದುಲ್ ಖಾದರ್, ಚೇತನ್ ವರ್ಮಾ, ನ್ಯಾಯವಾದಿ ಅಬ್ದುಸ್ಸಲಾಂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News