ಜಿ.ಪಂ. ಅಧ್ಯೆಕ್ಷೆಗೆ ಫೆಸ್ ಬುಕ್ ನಲ್ಲಿ ಅಶ್ಲೀಲ ಕಮೆಂಟ್ : ಆರೋಪಿ ಸೆರೆ

Update: 2017-10-05 11:53 GMT

ಬಾಗಲಕೋಟೆ, ಅ. 5: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಕಾಶಪ್ಪನವರ ಬಗ್ಗೆ ಪೇಸ್ ಬುಕ್ ನಲ್ಲಿ ಅವಹೇಳನಕಾರಿ ಕಮೆಂಟ್ ಮಾಡಿದ್ದಾನೆ ಎನ್ನಲಾದ  ಜಮಖಂಡಿ ಮೂಲದ ಭೀಮಾ ಮೆಂಡಿಗೇರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 

ವೀಣಾ ಕಾಶಪ್ಪನವರ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಪತ್ನಿ. ಇತ್ತೀಚೆಗೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಮೋದಿ ವಿರುದ್ಧ  ಏಕವಚನದಲ್ಲಿ ವೇದಿಕೆಯೊಂದರಲ್ಲಿ ಮಾತನಾಡಿದ್ದರು. ಆ ಬಗ್ಗೆ ಶಿವಾನಂದ ಕಲ್ಯಾಣಿ ಎಂಬ ಬಿಜೆಪಿ ಕಾರ್ಯಕರ್ತ ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ. ಇದಕ್ಕೆ ಕೆಲವರು ಪರ, ವಿರೋಧ ಕಮೆಂಟ್ ಮಾಡಿದ್ದಾರೆ. ಆದರೆ ಭೀಮಾ ಮೆಂಡಿಗೇರಿ ಎಂಬಾತ ಮಾತ್ರ ವಿಜಯಾನಂದ ಕಾಶಪ್ಪನವರ ಹೇಳಿಕೆ ಬಗ್ಗೆ ಅವರ ಪತ್ನಿ ವೀಣಾ ಕಾಶಪ್ಪನವರ ಬಗ್ಗೆ ತೀರಾ ಅಶ್ಲೀಲ ಪದ ಬಳಸಿ ಕಮೆಂಟ್ ಮಾಡಿದ್ದಾನೆ ಎಂದು ದೂರಲಾಗಿತ್ತು.

ಈ ಕುರಿತು ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಶ್ಲೀಲ ಕಮೆಂಟ್ ಮಾಡಿದ  ಭೀಮಾ ಮೆಂಡಿಗೇರಿಯನ್ನು ಇಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News