×
Ad

ಗುವಾಹತಿಯಲ್ಲಿ ಬಿಗಿ ಬಂದೋಬಸ್ತ್

Update: 2017-10-06 23:54 IST

ಗುವಾಹತಿ, ಅ.6: ಫಿಫಾ ಅಂಡರ್-17 ವಿಶ್ವಕಪ್ ಪಂದ್ಯಗಳ ಹಾಗೂ ಭಾರತ-ಆಸ್ಟ್ರೇಲಿಯ ನಡುವಿನ ಟ್ವೆಂಟಿ-20 ಪಂದ್ಯದ ಆತಿಥ್ಯವಹಿಸಿರುವ ಗುವಾಹಟಿ ನಗರದ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದಲ್ಲಿ ಇದೇ ಮೊದಲ ಬಾರಿ ಅ.8 ರಂದು ವಿಶ್ವಕಪ್ ಪಂದ್ಯ ನಡೆಯಲಿದೆ. ಅ.10 ರಂದು ಟ್ವೆಂಟಿ-20 ಪಂದ್ಯ ನಿಗದಿಯಾಗಿದೆ. ‘‘ಎರಡೂ ಕ್ರೀಡಾಸ್ಪರ್ಧೆಗಳು ಭಾರೀ ಯಶಸ್ಸು ಸಾಧಿಸಲು ಪೊಲೀಸರು ಹಾಗೂ ಪೌರಾಡಳಿತ ಪ್ರಯತ್ನಿಸಲಿದೆ. ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಲ್ಲೆಡೆ ಬಿಗಿಭದ್ರತೆ ಏರ್ಪಡಿಸಿದ್ದೇವೆ’’ ಎಂದು ಅಸ್ಸಾಂ ಪೊಲೀಸ್ ಪ್ರಧಾನ ನಿರ್ದೇಶಕ ಮುಕೇಶ್ ಸಹಾಯ್ ಹೇಳಿದ್ದಾರೆ. ಗುವಾಹತಿಯ ಇಂದಿರಾಗಾಂಧಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ವಿಶ್ವಕಪ್‌ನ ಸೆಮಿಫೈನಲ್ ಸಹಿತ ಒಟ್ಟು 9 ಪಂದ್ಯಗಳು ನಡೆಯಲಿವೆ. ಕ್ರಿಕೆಟ್ ಪಂದ್ಯ ಹೊಸದಾಗಿ ನಿರ್ಮಾಣಗೊಂಡಿರುವ ಬರ್ಸಪರದ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News