ಗುರ್ಮೀತ್ ಸಿಂಗ್ ನ ಮುಖ್ಯ ಸಹವರ್ತಿಗಳಿಗೆ ವೃಷಣಗಳಿಲ್ಲ..!
ಹೊಸದಿಲ್ಲಿ, ಅ.7: ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ನ ಮುಖ್ಯ ಕಾನೂನು ಸಲಹೆಗಾರ ದಾನ್ ಸಿಂಗ್ ಹಾಗೂ ಆಪ್ತ ಸಹಾಯಕ ರಾಕೇಶ್ ಕುಮಾರ್ ಎಂಬವರಿಗೆ ವೃಷಣಗಳಿಲ್ಲ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಡೇರಾ ಅನುಯಾಯಿಗಳಿಗೆ ಗುರ್ಮೀತ್ ಬಲವಂತದಿಂದ ಇಂತಹ ಶಿಕ್ಷೆಗಳನ್ನುವಿಧಿಸುತ್ತಿದ್ದ ಎಂಬ ಶಂಕೆಗೆ ಇದು ಮತ್ತಷ್ಟು ಪುಷ್ಠಿ ನೀಡಿದೆ.
ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ ಜೈಲುಪಾಲಾದ ನಂತರ ಆತನ ಅನುಯಾಯಿಗಳಿಂದ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಬಂಧಿತರನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ವೃಷಣಗಳು ಇಲ್ಲದೇ ಇರಲು ನೈಸರ್ಗಿಕ ಕಾರಣಗಳಿವೆಯೇ ಅಥವಾ ಬೇರೆ ಏನಾದರೂ ಕಾರಣವಿದೆಯೇ ಎಂದು ತಿಳಿಯಲು ತಜ್ಞರ ಸಮಿತಿಯೊಂದನ್ನೂ ರಚಿಸಲಾಗಿದೆ.
ಹರ್ಯಾಣದ ಸಿರ್ಸಾದಲ್ಲಿರುವ ಡೇರಾ ಮುಖ್ಯ ಕಾರ್ಯಾಲಯದಲ್ಲಿ 2012ರಲ್ಲಿ ಕನಿಷ್ಠ 400 ಮಂದಿಯ ವೃಷಣಗಳನ್ನು ಕತ್ತರಿಸಲಾಗಿದೆ ಎಂದು ಡೇರಾದ ಮಾಜಿ ಸದಸ್ಯರೊಬ್ಬರು ಈ ಹಿಂದೆ ಆರೋಪಿಸಿದ್ದರು. ಈ ಬಗ್ಗೆ ಸಿಬಿಐ 2015ರಿಂದಲೇ ತನಿಖೆ ನಡೆಸುತ್ತಿದ್ದು, ಇತ್ತೀಚಿಗಿನ ಬೆಳವಣಿಗೆಗಳು ಈ ತನಿಖೆಗೆ ಸಹಕಾರಿಯಾಗಲಿವೆಯೆಂದು ನಂಬಲಾಗಿದೆ.