ಅಹ್ಮದಾಬಾದ್ ನಲ್ಲಿ 15 ಕಚ್ಚಾ ಬಾಂಬ್ ಗಳು ಪತ್ತೆ

Update: 2017-10-07 14:32 GMT

ಅಹ್ಮದಾಬಾದ್, ಅ.7: ಕಡಿಮೆ ತೀವ್ರತೆಯ 15 ಕಚ್ಚಾ ಬಾಂಬ್ ಗಳು ಪೊಲೀಸ್ ಹೊರಠಾಣೆಯೊಂದರ ಬಳಿ ಪತ್ತೆಯಾದ ಘಟನೆ ದರಿಯಾಪುರದಲ್ಲಿ ನಡೆದಿದೆ.

ದರಿಯಾಪುರ್ ಪೊಲೀಸ್ ಹೊರಠಾಣೆಯ ಸಮೀಪ ಟೇಪ್ ಗಳಿಂದ ಸುತ್ತಲ್ಪಟ್ಟಿದ್ದ 15 ಬಾಂಬ್ ಗಳು ಕಸದ ತೊಟ್ಟಿಯ ಸಮೀಪ ಇದ್ದುದನ್ನು ವ್ಯಕ್ತಿಯೊಬ್ಬರು ಗಮನಿಸಿದ್ದಾರೆ ಎಂದು ನಗರ ಪೊಲೀಸ್ ಕಂಟ್ರೋಲ್ ರೂಂ ಮಾಹಿತಿ ನೀಡಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು, ಬಾಂಬ್ ನಿಷ್ಕ್ರಿಯ ದಳ ಹಾಗು ಫೋರೆನ್ಸಿಕ್ ತಜ್ಞರು ಸ್ಥಳಕ್ಕೆ ಧಾವಿಸಿದ್ದಾರೆ.

“ಬ್ರೌನ್ ಟೇಪ್ ನಿಂದ ಸುತ್ತಲ್ಪಟ್ಟ 15 ತಂಬಾಕು ಕ್ಯಾನ್ ಗಳು ನಮಗೆ ಸಿಕ್ಕಿವೆ. ಇದರೊಳಗಿನ ವಸ್ತುಗಳನ್ನು ಪರಿಶೀಲಿಸಿದ ಫೋರೆನ್ಸಿಕ್ ತಜ್ಞರು ಇದು ಕಡಿಮೆ ತೀವ್ರತೆಯ ಕಚ್ಚಾ ಬಾಂಬ್ ಗಳು ಎಂದು ತಿಳಿಸಿದ್ದಾರೆ” ಎಂದು ಉಪ ಕಮಿಷನರ್ ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ಈ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ನಾವು ಬಂಧಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

“ದೀಪಾವಳಿ ಸಂದರ್ಭ ಬಳಸುವ ಪಟಾಕಿ ಬಾಂಬ್ ಗಳು, ಹರಿತವಾದ ವಸ್ತುಗಳು, ಗಾಜಿನ ಚೂರುಗಳು ಈ ಕ್ಯಾನ್ ನೊಳಗಿತ್ತು. ಈ ಕಚ್ಚಾ ಬಾಂಬ್ ಗಳು ಅತೀ ಕಡಿಮೆ ಗುಣಮಟ್ಟದ್ದಾಗಿದೆ” ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News