ಜಯ ಭಾರತ್ ಮಾರುತಿ ಗುಂಪಿನ ಮೇಲೆ ಐಟಿ ದಾಳಿ
Update: 2017-10-07 21:25 IST
ಹೊಸದಿಲ್ಲಿ, ಅ. 7: ದಿಲ್ಲಿ ಹಾಗೂ ಎನ್‌ಸಿಆರ್ ವಲಯದಲ್ಲಿರುವ ಪ್ರಮುಖ ಅಟೋ ಉತ್ಪಾದನೆ ಕಂಪೆನಿ ಜಯ ಭಾರತ್ ಮಾರುತಿ ಗುಂಪಿನ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿರಂತರ ದಾಳಿ ನಡೆಸಿದ್ದಾರೆ.
ಗುರುವಾರ ಆರಂಭವಾದ ದಾಳಿಯಲ್ಲಿ ಎನ್‌ಸಿಆರ್‌ನಾದ್ಯಂತ ಕಂಪೆನಿ ಇರುವ 50 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಸಂಸ್ಥೆಯಿಂದ 7 ಕೋ. ರೂ. ಹಾಗೂ 3 ಕಿ.ಗ್ರಾಂ. ಗಿಂತಲೂ ಹೆಚ್ಚು ಚಿನ್ನ ಹಾಗೂ ಆಭರಣಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.