ಯೂಸುಫ್ ಪಠಾಣ್ ಶತಕ, ಇರ್ಫಾನ್ ಅರ್ಧಶತಕ

Update: 2017-10-08 18:25 GMT

ಬರೋಡಾ, ಅ.8: ಮಧ್ಯಪ್ರದೇಶ ವಿರುದ್ಧ ರಣಜಿ ಟ್ರೋಫಿಯ ಮೂರನೆ ದಿನವಾದ ರವಿವಾರ ಬರೋಡಾದ ಬ್ಯಾಟ್ಸ್‌ಮನ್ ಯೂಸುಫ್ ಪಠಾಣ್ ಶತಕ ದಾಖಲಿಸಿದರೆ, ಸಹೋದರ ಇರ್ಫಾನ್ ಪಠಾಣ್ ಅರ್ಧಶತಕ ಬಾರಿಸಿದ್ದಾರೆ.

ಹೊಡಿಬಡಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಯೂಸುಫ್ 111 ರನ್‌ಗಳ ಇನಿಂಗ್ಸ್‌ನಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್‌ಗಳಿದ್ದವು. 80 ರನ್ ಗಳಿಸಿರುವ ಇರ್ಫಾನ್ 10 ಬೌಂಡರಿ, 3 ಸಿಕ್ಸರ್‌ಗಳನ್ನು ಸಿಡಿಸಿದರು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಮಧ್ಯಪ್ರದೇಶ ತಂಡ ಮೊದಲ ಇನಿಂಗ್ಸ್‌ನಲಿ 551 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಬರೋಡಾ ತಂಡ ಒಂದು ಹಂತದಲ್ಲಿ 54 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ ಜೊತೆಯಾದ ಪಠಾಣ್ ಸಹೋದರರು 188 ರನ್ ಜೊತೆಯಾಟ ನಡೆಸಿ ಬರೋಡಾವನ್ನು ಫಾಲೋ-ಆನ್ ಭೀತಿಯಿಂದ ಪಾರು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News